ಗದಗ:ಮಲಪ್ರಭಾ ಪ್ರವಾಹಕ್ಕೆ ನಡುಗಡ್ಡೆಯಂತಾದ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮದ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಬೆಳ್ಳೇರಿ ಗ್ರಾಮದ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು ಲಖಮಾಪುರದ ಎಲ್ಲಾ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ.
ಮಲಪ್ರಭಾ ನದಿ ಅಬ್ಬರ: ನೂರಾರು ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ
ಮಲಪ್ರಭಾ ನದಿ ನೀರಿನ ಅಬ್ಬರಕ್ಕೆ ಸಿಲುಕಿ ನೂರಾರು ಕುಟುಂಬಗಳ ಮನೆಗಳು ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೊನೆಗೂ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆದಿದ್ದು, ಜನರನ್ನು ಸ್ಥಳಾಂತರಿಸಲಾಗಿದೆ.
ಮಲಪ್ರಭಾ ನದಿ ಅಬ್ಬರ: ನೂರಾರು ಕುಟುಂಬಗಳು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ
ಸುಮಾರು 68 ಕುಟುಂಬದ ನೂರಾರು ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನೆರೆ ಕಡಿಮೆ ಆಗುವವರೆಗೆ ಬಿಸಿನೀರು, ಶೌಚಾಲಯ, ಸ್ನಾನಗೃಹ, ವೈದ್ಯಕೀಯ ಸೌಲಭ್ಯ, ಶುದ್ಧ ಕುಡಿಯುವ ನೀರು ಸೇರಿದಂತೆ ಸಮಯಕ್ಕೆ ಸರಿಯಾಗಿ ಊಟ ಉಪಹಾರದ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗುತ್ತಿದೆ.
ನೆರೆ ಬಂದಾಗಲೆಲ್ಲಾ ಹೀಗೆ ಸ್ಥಳಾಂತರ ಮಾಡುವುದು ಸರಿಯಲ್ಲ. ಸರ್ಕಾರ ನಮಗೆ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಸೂರು ಕಲ್ಪಿಸುವ ಮೂಲಕ ಸಮಸ್ಯೆ ತಪ್ಪಿಸಲಿ ಎಂಬುದು ಸಂತ್ರಸ್ತರ ಬೇಡಿಕೆಯಾಗಿದೆ.