ಗದಗ: ಉತ್ತರದ ಸಹ್ಯಾದ್ರಿ ಎಂದೇ ಹೆಸರಾಗಿರೋ ಜಿಲ್ಲೆಯ ಕಪ್ಪತಗುಡ್ಡಕ್ಕೂ ಬೆಂಕಿ ಬಿದ್ದಿದೆ. ಇದರಿಂದ ಸುಮಾರು 60 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಔಷಧಿಯ ಸಸ್ಯಗಳು ಬೆಂಕಿಗಾಹುತಿಯಾಗಿವೆ.
ಕಪ್ಪತಗುಡ್ಡಕ್ಕೆ ಬೆಂಕಿ... 60ಕ್ಕೂ ಹೆಚ್ಚು ಎಕರೆ ಔಷಧೀಯ ಸಸ್ಯಗಳು ಬೆಂಕಿಗಾಹುತಿ - medicinal plants
ಕಪ್ಪತಗುಡ್ಡಕ್ಕೆ ಬೆಂಕಿ ತಗುಲಿ 60 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಔಷಧೀಯ ಸಸ್ಯಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.
ಕಪ್ಪತಗುಡ್ಡಕ್ಕೆ ಬೆಂಕಿ
ಕಪ್ಪತಗುಡ್ಡಕ್ಕೆ ಬೆಂಕಿ
ಇನ್ನು ನಿನ್ನೆ ಸಂಜೆ ವೇಳೆ ಕಾಣಿಸಿಕೊಂಡ ಬೆಂಕಿಯನ್ನು ತಹಬದಿಗೆ ತರಲು ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿಯಿಡೀ ಹರಸಾಹಸಪಟ್ಟು, ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಬಳಿ ಈ ಬೆಂಕಿ ಕಾಣಿಸಿಕೊಂಡಿತ್ತು.