ಗದಗ: ಭಾರಿ ಮಳೆ, ಪ್ರವಾಹ ಕಡಿಮೆಯಾಗಿದ್ದರೂ ಅದರ ದುಷ್ಪರಿಣಾಮಗಳು ಈಗ ಉಂಟಾಗುತ್ತಿವೆ. ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಮುಳಗಡೆಯಾಗಿದ್ದವು.
ಮಳೆ ಅವಾಂತರ: ಕಣ್ಣೆದುರೇ ಕುಸಿದು ಬಿತ್ತು ಮನೆ - ವಿಡಿಯೋ
ನರಗುಂದ ತಾಲೂಕಿನ ವಾಸನ ಗ್ರಾಮದಲ್ಲಿ ನೋಡ ನೋಡುತ್ತಿದ್ದಂತೆಯೇ ಮನೆಯೊಂದು ನೆಲಕ್ಕುರುಳಿದೆ. ಮನೆಯ ಗೋಡೆ ಬೀಳುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ.
ಕುಸಿದ ಮನೆ
ಕಳೆದ 3 ದಿನಗಳಿಂದ ಪ್ರವಾಹ ಇಳಿಮುಖವಾಗಿದ್ದು ಗಾಮಸ್ಥರೆಲ್ಲ ತಮ್ಮ-ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಆದರೆ ಪ್ರವಾಹಕ್ಕೆ ತುತ್ತಾಗಿರೋ ಮನೆಗಳು ನೀರಿನಿಂದ ನೆನೆದು ಯಾವ ಹೊತ್ತಲ್ಲಿ ನೆಲಕ್ಕುರುಳತ್ತವೆಯೋ ಎಂಬ ಭಯ ಜನರನ್ನು ಕಾಡುತ್ತಿದೆ.
ವಾಸನ ಗ್ರಾಮದಲ್ಲಿ ಮನೆಯೊಂದು ದಿಢೀರ್ ನೆಲಕ್ಕುರುಳಿದೆ. ಮನೆಯ ಗೋಡೆ ಬೀಳುತ್ತಿರುವ ಭಯಾನಕ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನಮ್ಮ ಜೀವ ಉಳಿಸಿ ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಒತ್ತಾಯಿಸುತ್ತಿದ್ದಾರೆ.