ಗದಗ: ನಿರಂತರ ಮಳೆಯಿಂದಾಗಿ ಮನೆಯೊಂದು ಧರೆಗುರುಳಿರುವ ಘಟನೆ ತಾಲೂಕಿನ ಅಂತೂರ ಬೆಂತೂರ ಗ್ರಾಮದಲ್ಲಿ ನಡೆದಿದೆ.
ಗದಗ: ನಿರಂತರ ಮಳೆಗೆ ಧರೆಗುರುಳಿದ ಮನೆ, ಕುಟುಂಬಸ್ಥರು ಪಾರು - ಅಂತೂರ ಬೆಂತೂರನ ಶಂಭುಲಿಂಗೇಶ್ವರ ಕಾಲೋನಿ
ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದಲ್ಲಿ ವಿಪರೀತ ಮಳೆಗೆ ಮನೆ ಕುಸಿಯಿತು.

ಗದಗದಲ್ಲಿ ನಿರಂತರ ಮಳೆಗೆ ಧರೆಗುರುಳಿದ ಮನೆ
ಗ್ರಾಮದ ರಾಮಪ್ಪ ಪೂಜಾರ ಎಂಬುವರಿಗೆ ಸೇರಿದ ಮನೆ ಬಿದ್ದಿದೆ. ಶಂಭುಲಿಂಗೇಶ್ವರ ಕಾಲೋನಿಯಲ್ಲಿ ಘಟನೆ ಜರುಗಿತು. ಅಡುಗೆ ಮನೆಯಲ್ಲಿದ್ದ ಚನ್ನವ್ವ ಪೂಜಾರ ಅದೃಷ್ಠವಶಾತ್ ಪಾರಾಗಿದ್ದಾರೆ. ಗೋಡೆ ಕುಸಿಯುತ್ತಿದ್ದಾಗ ಮನೆಯಲ್ಲಿದ್ದ ನಾಲ್ವರು ಕುಟುಂಬಸ್ಥರು ಹೊರಗೋಡಿ ಬಂದರು. ಘಟನೆಯಿಂದ ಆಘಾತಗೊಂಡ ಚನ್ನವ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೃಹೋಪಯೋಗಿ ವಸ್ತುಗಳು ನಾಶವಾಗಿವೆ.