ಗದಗ: ಮುದ್ರಣ ಕಾಶಿ ಗದಗ ಜಿಲ್ಲೆಯ 7 ವರ್ಷದ ಬಾಲಾಕಿಗೆ ಇಂದು ತಮಿಳುನಾಡಿನ ಮಧುರೈನಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ.
ನರಗುಂದದ ಏಳು ವಯಸ್ಸಿನ ಪುಟ್ಟಿಗೆ ಇಂದು ತಮಿಳುನಾಡಿನ ವಿವಿ 'ಗೌಡಾ' ಪ್ರದಾನ!! - ತಮಿಳುನಾಡಿನ ಮಧುರೈ
ಗದಗ ಜಿಲ್ಲೆ ನರಗುಂದ ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಬಾಲಕಿ ವೈದೃತಿ ಕೋರಿಶೆಟ್ಟರ್ಗೆ ಇಂದು ತಮಿಳುನಾಡು ಯುನಿವರ್ಸಲ್ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ.
![ನರಗುಂದದ ಏಳು ವಯಸ್ಸಿನ ಪುಟ್ಟಿಗೆ ಇಂದು ತಮಿಳುನಾಡಿನ ವಿವಿ 'ಗೌಡಾ' ಪ್ರದಾನ!! honorary-doctorate-for-7-year-old-girl](https://etvbharatimages.akamaized.net/etvbharat/prod-images/768-512-5838319-thumbnail-3x2-gdg.jpg)
ಗದಗ ಜಿಲ್ಲೆ ನರಗುಂದ ಪಟ್ಟಣದ ಬಾಲಕಿ ವೈದೃತಿ ಕೋರಿಶೆಟ್ಟರ್ಗೆ ತಮಿಳುನಾಡು ಯುನಿವರ್ಸಲ್ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. ನರಗುಂದ ಪಟ್ಟಣದ ಸರ್.ಎಂ ವಿಶ್ವೇಶ್ವರಯ್ಯ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುವ ಈ ಬಾಲಕಿಯ ಅಪಾರ ಜ್ಞಾನ ಮತ್ತು ನೆನಪಿನ ಶಕ್ತಿ ಹೊಂದಿದ್ದಾಳೆ. ರಾಜಕೀಯ, ಅರ್ಥಶಾಸ್ತ್ರ, ಇತಿಹಾಸ, ಕನ್ನಡ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶ್ನೆಗಳಲ್ಲದೆ ಪ್ರಧಾನಿ, ಮುಖ್ಯಮಂತ್ರಿ, ಸಚಿವರು, ಶಾಸಕರು, ರಾಜ ಮಹಾರಾಜರ ಆಳ್ವಿಕೆಯ ಕಾಲಾವಧಿ ಕುರಿತು ಕೇಳುವ ಪ್ರಶ್ನೆಗಳಿಗೆ ಫಟಾಫಟ್ ಉತ್ತರಿಸುತ್ತಾಳೆ. ಈ ಬಾಲಕಿಯ ಅದ್ಭುತ ಸಾಧನೆ ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುತ್ತಿದೆ.
ತಮಿಳುನಾಡಿನ ಮಧುರೈನಲ್ಲಿ ನಡೆಯುವ ಯುನಿವರ್ಸಲ್ ವಿವಿ ಘಟಿಕೋತ್ಸವದಲ್ಲಿ ಇಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಈ ಬಾಲಕಿ ಕರ್ನಾಟಕ ದರ್ಶನ ಸೇವಾ ಅಭಿವೃದ್ಧಿ ಸಂಸ್ಥೆ ನೀಡುವ ಕರ್ನಾಟಕ "ಜ್ಞಾನ ಚಕ್ರವರ್ತಿ" ರಾಷ್ಟ್ರೀಯ ಪ್ರಶಸ್ತಿ ಸೇರಿ ಅನೇಕ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಮುಡಿಗೆರೆಸಿಕೊಂಡಿದ್ದಾಳೆ.