ಕರ್ನಾಟಕ

karnataka

ETV Bharat / state

ಹೋಮ್ ಕ್ವಾರಂಟೈನ್​ ನಿಯಮ ಉಲ್ಲಂಘನೆ: 22 ಜನರ ವಿರುದ್ಧ ಪ್ರಕರಣ - Home Quarantine

ಹೋಮ್​ ಕ್ವಾರಂಟೈನ್​ ನಿಯಮ ಉಲ್ಲಂಘನೆ ಆರೋಪದ ಮೇಲೆ 22 ಜನರ ವಿರುದ್ಧ ಗದಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗದಗ ಜಿಲ್ಲಾಡಳಿತ ಭವನ
ಗದಗ ಜಿಲ್ಲಾಡಳಿತ ಭವನ

By

Published : Jul 9, 2020, 4:07 PM IST

ಗದಗ:ಶಂಕಿತ ರೋಗಿಗಳಿಗೆ ಹೋಮ್ ಕ್ವಾರಂಟೈನ್​ಗೆ ಒಳಗಾಗುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿತ್ತು. ಅದನ್ನು ಉಲ್ಲಂಘಿಸಿದ ಜಿಲ್ಲೆಯ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಗದಗ ತಾಲೂಕಿನ ಪಾಪನಾಶಿ ತಾಂಡಾ, ಅಡವಿ ಸೋಮಾಪುರ ತಾಂಡಾ, ನಾಗಾವಿ ತಾಂಡಾದ ಏಳು ಜನರ ವಿರುದ್ಧ ಗದಗ ಗ್ರಾಮೀಣ ಠಾಣೆಯಲ್ಲಿ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕೋವಿಡ್-19 ನಿಯಮ ಉಲ್ಲಂಘನೆ ಸಂಬಂಧ ದೂರು ನೀಡಿದ್ದಾರೆ. ರೋಣ ತಾಲೂಕಿನ ಅಸೂಟಿ ಗ್ರಾಮದ ಒಬ್ಬ, ಸವಡಿ ಗ್ರಾಮದ ಇಬ್ಬರ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಜಿ.ಬಿ.ಜಕ್ಕನಗೌಡ್ರು ದೂರು ದಾಖಲಿಸಿದ್ದಾರೆ.

ಮುಂಡರಗಿ ಉಪ ತಹಶೀಲ್ದಾರ್​​ ಎಸ್.ಎಸ್.ಬಿಚ್ಚಾಲಿ ಅವರೂ ಪಟ್ಟಣದ ಹುಡ್ಕೋ ಕಾಲೋನಿಯಲ್ಲಿ‌ ಹೋಮ್​​ ಕ್ವಾರಂಟೈನ್​ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ 10 ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ನರಗುಂದ ತಾಲೂಕಿನ ಒಬ್ಬ ಹಾಗೂ ಶಿರಹಟ್ಟಿ ತಾಲೂಕಿನ ದೇವಿಹಾಳ ಗ್ರಾಮದ ಒಬ್ಬನ ವಿರುದ್ಧವೂ ದೂರು ದಾಖಲಾಗಿದೆ. ಆರೋಪಿತರೆಲ್ಲಾ ರಾಜ್ಯ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಹೋಮ್ ಕ್ವಾರಂಟೈನ್​ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ.

ಇತರರಿಗೆ ಸೋಂಕು ತಗುಲುವ ವಿಚಾರ ಗೊತ್ತಿದ್ದರೂ ನಿಯಮ ಉಲ್ಲಂಘಿಸಿದ್ದಾರೆ. 14 ದಿನಗಳ ಕಾಲ ಕಡ್ಡಾಯವಾಗಿ ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕಾಗಿದ್ದ ಇವರ ವಿರುದ್ಧ ಗದಗ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details