ಗದಗ:ಯಡಿಯೂರಪ್ಪ ಮತ್ತು ಕೇಂದ್ರ ಸರ್ಕಾರದಿಂದ ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು ಅನ್ನೊ ಹಾಗೆ ರಾಜ್ಯದ ಜನರ ಪರಿಸ್ಥಿತಿ ಆಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೆಚ್.ಕೆ.ಪಾಟೀಲ್ ಕಿಡಿ ಕಾರಿದ್ದಾರೆ.
ಗಂಡ-ಹೆಂಡಿರ ನಡುವೆ ಕೂಸು ಬಡವಾಯ್ತು: ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ವಾಗ್ದಾಳಿ - ಹೆಚ್.ಕೆ.ಪಾಟೀಲ್ ಆಕ್ರೋಶ
ಸಂಪುಟ ರಚನೆ ನೆಪದಲ್ಲಿ ರಾಜಕೀಯ ದೊಂಬರಾಟ ನಡೆದಿದೆ ಹಾಗಾಗಿ ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ಗಾಸಿಗೊಂಡಿದ್ದಾರೆ ಎಂದಿದ್ದಾರೆ.
ಎಚ್.ಕೆ.ಪಾಟೀಲ್
ಹುಲಕೋಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಅಭಿವೃದ್ಧಿ ಕುಂಠಿತಗೊಂಡಿದೆ. ಕಳೆದ ಸರ್ಕಾರದ ಯೋಜನೆಗಳೇ ಇನ್ನು ಕುಂಟುತ್ತಾ ಸಾಗಿವೆ. ಇಂತಹ ಸಂದರ್ಭದಲ್ಲಿ ಸಂಪುಟ ರಚನೆ ನೆಪದಲ್ಲಿ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಈ ಕಾರಣದಿಂದ ಬಿಜೆಪಿ ಸರ್ಕಾರದಿಂದ ರಾಜ್ಯದ ಜನ ಗಾಸಿಗೊಂಡಿದ್ದಾರೆ ಎಂದಿದ್ದಾರೆ.