ಗದಗ: ಜಿಲ್ಲೆಯ ಎಆರ್ಟಿ ಕೇಂದ್ರವನ್ನು ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕೆಂದು ಆದೇಶವಾಗಿದ್ದು, ಕಳೆದ ಮೂರು ದಿನದಿಂದ ART ಕೇಂದ್ರವನ್ನು ಅಧಿಕಾರಿಗಳು ಬಂದ್ ಮಾಡಿದ್ದು, ಇದರಿಂದ ಹೆಚ್ಐವಿ ಸೋಂಕಿತರಿಗೆ ತೊಂದರೆಯಾಗುತ್ತಿದೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.
ಗದಗದಲ್ಲಿ ಅಧಿಕಾರಿಗಳ ಮುಸುಕಿನ ಗುದ್ದಾಟದಲ್ಲಿ ಹೆಚ್ಐವಿ ಸೋಂಕಿತರಿಗೆ ತೊಂದರೆ! - ART central passage
ಎಆರ್ಟಿ ಕೇಂದ್ರವನ್ನು ಜಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಬೇಕೆಂದು ಆದೇಶವಾಗಿದ್ದು, ಕಳೆದ ಮೂರು ದಿನದಿಂದ ART ಕೇಂದ್ರವನ್ನು ಅಧಿಕಾರಿಗಳು ಬಂದ್ ಮಾಡಿದ್ದಾರೆ. ಪದೇ ಪದೇ ಸ್ಥಳಾಂತರ ಮಾಡ್ತಿದ್ದಾರೆ. ಇದರಿಂದ ಹೆಚ್ಐವಿ ಸೋಂಕಿತರಿಗೆ ತುಂಬಾನೆ ತೊಂದರೆಯಾಗುತ್ತಿದೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.
ಗದಗ
ಜಿಲ್ಲಾ ಆರೋಗ್ಯ ಅಧಿಕಾರಿ ಹಾಗೂ ಎಆರ್ಟಿ ಕೇಂದ್ರ ಸಮೀಕ್ಷಣಾ ಅಧಿಕಾರಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಹೆಚ್ಐವಿ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಪದೇ ಪದೇ ಬೇರೆ ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡ್ತಿದ್ದಾರೆ. ಇದರಿಂದ ಸೋಂಕಿತರಿಗೆ ತುಂಬಾನೆ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೆಚ್ಐವಿ ಸೋಂಕಿತರ ವಿಷಯದಲ್ಲಿ ಆರೋಗ್ಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡುವ ಮೂಲಕ ರೋಗಿಗಳನ್ನು ಬಲಿ ಕೊಡ್ತಿದ್ದಾರೆ. ART ಕೇಂದ್ರದಿಂದ ಔಷಧ ನೀಡುವುದನ್ನು ಬಂದ್ ಮಾಡಿದ್ದಾರೆ. ಎ.ಆರ್.ಟಿ ಕೇಂದ್ರ ಸ್ಥಳಾಂತರ ಬೇಡ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದರು.