ಗದಗ: ನಗರದ ಬೆಟಗೇರಿಯಲ್ಲಿ ಸುರಿದ ಭಾರಿ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದೆ. ರಾಜಕಾಲುವೆ ತುಂಬಿ ಹರಿದು ಪಕ್ಕದ ಪ್ರದೇಶಗಳಿಗೂ ನೀರು ನುಗ್ಗಿ ರಾತ್ರಿಯಿಡೀ ಜನರು ಪರಿತಪಿಸಿದ್ದಾರೆ. 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಾಮಗ್ರಿಗಳು ನೀರು ಪಾಲಾಗಿವೆ.
ಪೆಟ್ರೋಲ್ ಬಂಕ್, ಸಾವಜಿ ಹೋಟೆಲ್ ಸೇರಿದಂತೆ ಸುತ್ತಮುತ್ತಲಿನ ಅಂಗಡಿ, ಕಟ್ಟಡಗಳಿಗೆ ನೀರು ನುಗ್ಗಿದೆ. ಪರ್ವತಗೌಡ ಪೆಟ್ರೋಲ್ ಬಂಕ್ನೊಳಗೆ ನೀರು ಹೊಕ್ಕು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲ್, ಡೀಸೆಲ್ ಹಾಳಾಗಿದೆ. ಪೆಟ್ರೋಲ್, ಡೀಸೆಲ್ ಟ್ಯಾಂಕ್‌ನೊಳಗೆ ಮಳೆ ನೀರು ಸೇರಿಕೊಂಡಿದೆ. ಸಿಬ್ಬಂದಿ ಟ್ಯಾಂಕ್ ನೀರು ಹೊರಹಾಕುತ್ತಿದ್ದಾರೆ.