ಗದಗ:ಜಿಲ್ಲೆಯ ಶಿರಹಟ್ಟಿ ತಾಲೂಕಿನ ಗೋವನಕೊಪ್ಪ ಗ್ರಾಮದ ಜವಳಿ ಹಳ್ಳದಲ್ಲಿ 68 ಕುರಿಗಳು ಕೊಚ್ಚಿ ಹೋದ ಘಟನೆ ನಡೆದಿದೆ.
ಧಾರಾಕಾರ ಮಳೆಗೆ ಕೊಚ್ಚಿ ಹೋದ 68 ಕುರಿಗಳು : ಜೀವ ಉಳಿಸಿಕೊಂಡ ಎರಡು ಮರಿಗಳು - ಶಿರಹಟ್ಟಿ ತಾಲೂಕಿನ ಗೋವನಕೊಪ್ಪ
ಗದಗ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಹಿನ್ನೆಲೆ ನಿನ್ನೆಯಿಂದ ಅವಾಂತರಗಳು ಸೃಷ್ಟಿಯಾಗಿದ್ದು ಸಾಲದೆಂಬಂತೆ 68 ಕುರಿಗಳು ಕೊಚ್ಚಿ ಹೋದ ಘಟನೆ ಕೂಡ ನಡೆದಿದೆ.

ಕುರಿಗಳು
ಮಾಲತೇಶ್ ಆಲೂರು ಮತ್ತು ಪ್ರಕಾಶ ಚನ್ನದಾಸರ ಎಂಬವರಿಗೆ ಸೇರಿದ ಕುರಿಗಳು ಕೊಚ್ಚಿಹೋಗಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಳೆ ನೀರು ಗ್ರಾಮಗಳನ್ನು ನುಂಗಿದೆ.ಮಳೆಯಿಂದ ಹಿಂಡಿನಲ್ಲಿದ್ದ 68 ಕುರಿಗಳು ಕೊಚ್ಚಿಹೋಗಿದ್ದು, ಎರಡು ಕುರಿ ಮರಿಗಳು ಮಾತ್ರ ಜೀವ ಉಳಿಸಿಕೊಂಡಿವೆ.
ಶಿರಹಟ್ಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.