ಕರ್ನಾಟಕ

karnataka

ETV Bharat / state

ಎಡಬಿಡದೆ ಸುರಿಯುತ್ತಿರುವ ಮಳೆ: ಶೇಂಗಾ ಬೆಳೆ ಸಂಪೂರ್ಣ ನಾಶ - ಗದಗ ಮಳೆ ಸುದ್ದಿ

ಗದಗ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ರೈತರು ಬೆಳೆದ ಶೇಂಗಾ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮಳೆಗೆ ಶೇಂಗಾ ಬೆಳೆ ನಾಶ
ಮಳೆಗೆ ಶೇಂಗಾ ಬೆಳೆ ನಾಶ

By

Published : Sep 21, 2020, 8:02 PM IST

Updated : Sep 21, 2020, 8:36 PM IST

ಗದಗ:ಬಿಟ್ಟು ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ಮಳೆಗೆ ಹಲವು ಬೆಳೆಗಳು ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಮಳೆಗೆ ಶೇಂಗಾ ಬೆಳೆ ಸಂಪೂರ್ಣ ನಾಶ

ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ ಗ್ರಾಮದ ರೈತರೊಬ್ಬರ ಶೇಂಗಾ ಬೆಳೆ, ಮಳೆ‌ ನೀರು ಹೊಲದಲ್ಲಿ ನಿಂತ ಪರಿಣಾಮ ಕೊಳೆತು ಹೋಗಿದೆ. ಗ್ರಾಮದ ಮುತ್ತಪ್ಪ ಪೂಜಾರ ಎಂಬುವರು ಎಕರೆಗೆ 8 ರಿಂದ 9 ಸಾವಿರ ರೂಪಾಯಿ ಖರ್ಚು ಮಾಡಿ ಶೇಂಗಾ ಬೆಳೆದಿದ್ದರು. ಆದ್ರೆ ವರುಣನ ಆರ್ಭಟ ಜೋರಾಗಿದ್ದರಿಂದ ಶೇಂಗಾ ಬೆಳೆ ಸಂಪೂರ್ಣ ನೀರಿನಲ್ಲಿ ಕೊಳೆತು ಹೋಗಿದೆ.

ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ಬೇಸತ್ತಿರೋ ರೈತ ಮುತ್ತಪ್ಪ ಅವರು ಕೊಳೆತ ಬೆಳೆಯನ್ನು ಕಿತ್ತು ಬದುವಿಗೆ ಹಾಕಿದ್ದಾರೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Last Updated : Sep 21, 2020, 8:36 PM IST

ABOUT THE AUTHOR

...view details