ಕರ್ನಾಟಕ

karnataka

ETV Bharat / state

ಗದಗದಲ್ಲಿ ರಕ್ಷಣಾ ಕಾರ್ಯಾಚರಣೆ ವಿಫಲ; 19 ಗಂಟೆಯಿಂದ ಸಾವು ಬದುಕಿನ ಹೋರಾಟ - Heavy rain in Gadaga

ಗದಗ ಜಿಲ್ಲೆಯ ಕೊಣ್ಣೂರು ಗ್ರಾಮಕ್ಕೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಗ್ರಾಮ ಜಲಾವೃತವಾಗಿದ್ದು, ರಕ್ಷಣಾ ಕಾರ್ಯಾಚರಣೆಯ ವಿಫಲವಾಗಿದೆ. ಪರಿಣಾಮ ಸುಮಾರು 20 ಜನರು ಕಳೆದ 19 ಗಂಟೆಗಳಿಂದ ಪ್ರಾಣ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ.

ಗದಗ ಮಹಾಮಳೆ: ರಕ್ಷಣಾ ಕಾರ್ಯಾಚರಣೆ ವಿಫಲ, ಸಾವು ಬದುಕಿನ ನಡುವೆ ಹೋರಾಡುತ್ತಿರುವ 20 ಜನ

By

Published : Aug 9, 2019, 8:33 AM IST

Updated : Aug 9, 2019, 9:34 AM IST

ಗದಗ:ಮಹಾ ಮಳೆಯಿಂದ ಗ್ರಾಮಕ್ಕೆ ನೀರು ನುಗ್ಗಿದ ಪರಿಣಾಮ 20ಕ್ಕೂ ಹೆಚ್ಚು ಜನರು 19 ಘಂಟೆಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರೋದ್ರಿಂದ ಕೊಣ್ಣೂರು ಗ್ರಾಮಕ್ಕೆ‌ ನೀರು ನುಗ್ಗಿದೆ. ಹೀಗಾಗಿ ಪ್ರವಾಹ ಬಂದ ಕಾರಣ ಗ್ರಾಮಸ್ಥರು ನಡು ನೀರಲ್ಲಿ ಸಿಲುಕಿಕೊಂಡಿದ್ದಾರೆ. ಸಂತ್ರಸ್ತರನ್ನು ರಕ್ಷಿಸಬೇಕಾದ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದ್ದು, ಕಾಲು ಮುಗಿತೀನಿ ಕಾಪಾಡ್ರೋ.. ಅಂತಾ ನಡುಗಡ್ಡೆ ಸಂತ್ರಸ್ತರು ಅಂಗಲಾಚುತ್ತಿದ್ದಾರೆ.

ಗದಗ ಮಹಾಮಳೆ: ರಕ್ಷಣಾ ಕಾರ್ಯಾಚರಣೆ ವಿಫಲ, ಸಾವು ಬದುಕಿನ ನಡುವೆ ಹೋರಾಡುತ್ತಿರುವ 20 ಜನ

ಪ್ರವಾಹದಲ್ಲಿ ಮಹಿಳೆಯರು ಮಕ್ಕಳು ಸೇರಿದಂತೆ 20 ಜನರು ಸಿಕ್ಕಿ ಹಾಕಿಕೊಂಡಿದ್ದು, ನೀರಿನ ರಭಸ ಜೋರಾಗಿರುವ ಕಾರಣ ರಕ್ಷಣಾ ಕಾರ್ಯ ವಿಫಲವಾಗಿದೆ.
ಈ ನಡುವೆ ದಿಕ್ಕು ತೋಚದೆ ಜಿಲ್ಲಾಡಳಿತ ಕೈ ಚೆಲ್ಲಿ ಕೂತಿದ್ದು, ಸಂತ್ರಸ್ತರ ರಕ್ಷಣೆಗೆ NDRF ತಂಡ ಆಗಮಿಸುತ್ತದೆ ಎಂಬ ಭರವಸೆ ನೀಡುತ್ತಿದ್ದಾರೆ.

Last Updated : Aug 9, 2019, 9:34 AM IST

ABOUT THE AUTHOR

...view details