ಕರ್ನಾಟಕ

karnataka

ETV Bharat / state

ಪೈಗಂಬರರ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಆರೋಪ; ಗದಗನಲ್ಲಿ ಮುಖ್ಯಶಿಕ್ಷಕ ಅಮಾನತು

ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ವಿದ್ಯಾರ್ಥಿಗಳಿಗೆ ಪೈಗಂಬರರ ಕುರಿತು ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಶಾಲೆಯ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

Amanthu
ಅಮಾನತುಗೊಂಡ ಶಿಕ್ಷಕ

By

Published : Sep 29, 2022, 11:30 AM IST

Updated : Sep 29, 2022, 10:57 PM IST

ಗದಗ: ಸರ್ಕಾರದ ನಿರ್ದೇಶನ ಇಲ್ಲದಿದ್ದರೂ ಪ್ರವಾದಿ ಪೈಗಂಬರ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಿದ ಆರೋಪದ ಮೇಲೆ ಗದಗ ತಾಲೂಕಿನ ನಾಗಾವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಅಬ್ದುಲ್‌ ಮುನಾಫ್‌ ಬಿಜಾಪುರ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಸಿದ್ರಾಮಪ್ಪ ಎಸ್‌.ಬಿರಾದಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಮಾನತು ಪತ್ರ

ಶಾಲೆಯ ಒಟ್ಟು 43 ವಿದ್ಯಾರ್ಥಿಗಳಿಗೆ 'ಮಹಮ್ಮದ(ಸ) ಎಲ್ಲರಿಗಾಗಿ' ಹಾಗೂ 'ಅಂತಿಮ ಪ್ರವಾದಿ ಮಹಮ್ಮದ(ಸ)' ಪುಸ್ತಕವನ್ನು ಮಕ್ಕಳಿಗೆ ತರಗತಿಯಲ್ಲಿ ವಿತರಿಸಿ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರಿಗೂ ಮಾಹಿತಿ ನೀಡದೇ ಪ್ರಬಂಧ ಸ್ಪರ್ಧೆ ನಡೆಸಿದ್ದಾರೆ. ಬಹುಮಾನ ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎನ್ನಲಾಗ್ತಿದೆ.

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾಡಿರುವುದರಿಂದ ಹಾಗೂ ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಪಿಎಸ್​ಐ ಹಗರಣ : ಅಮೃತ್ ಪಾಲ್ ಡಬಲ್‌ ಝೀರೋ ಕೋಡ್ ವರ್ಡ್​ ಭೇದಿಸಿದ ಸಿಐಡಿ

Last Updated : Sep 29, 2022, 10:57 PM IST

ABOUT THE AUTHOR

...view details