ಗದಗ: ಶನಿವಾರ ಬೆಳಗಿನ ಜಾವ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ವ್ಯಪ್ತಿಯಲ್ಲಿನ ಆಂಜನೇಯ ಮೂರ್ತಿಯನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಶ್ರಾವಣ ಶನಿವಾರದ ಬೆಳಗಿನ ಪೂಜೆಗೆಂದು ಅರ್ಚಕರು ಹನುಮನ ಕಟ್ಟೆಗೆ ತೆರಳಿದ್ದ ಸಮಯ ಹನುಮ ಮೂರ್ತಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಾರುತಿ ದೇವಸ್ಥಾನದ ಸಮಿತಿ ಸದಸ್ಯರು ಸೇರಿ ಸಭೆ ಸೇರಿದ್ದು, ಮೂರ್ತಿಯನ್ನು ವಾಪಸ್ ತಂದಿಡದಿದ್ದರೆ ಪೊಲೀಸ್ ಠಾಣೆಗೆ ದೂರು ಕೊಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ ವಿಡಿಯೋ ಹರಿಬಿಟ್ಟ ಕಮಿಟಿ ಸದಸ್ಯರು, ಐತಿಹಾಸಿಕ ಮೂರ್ತಿಯನ್ನು ಕಳ್ಳತನ ಮಾಡಲಾಗಿದೆ. ಪೂಜೆಗೆ ಬಂದಿರುವ ಭಕ್ತರಿಗೆ ಸ್ವಾಮಿ ವಿಗ್ರಹ ಇಲ್ಲದ್ದನ್ನು ಕಂಡು ಅತೀವ ನೋವಾಗಿದೆ. ವಿಗ್ರಹವನ್ನು ತಂದಿಡಬೇಕು. ಇಲ್ಲವಾದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸೋದಾಗಿ ಎಚ್ಚರಿಕೆ ರವಾನಿಸಿದ್ದಾರೆ.