ಗದಗ: ಸೋತವರನ್ನು ಮಂತ್ರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಅಗೌರವ ತೋರುವ ಆಲೋಚನೆಯಾಗಿದೆ, ಇಂಥ ಬೆಳವಣಿಗೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಎಚ್. ಕೆ. ಪಾಟೀಲ್ ಗುಡುಗಿದರು.
ನಗರದಲ್ಲಿ ನಡೆದ ಜೆ. ಎಚ್. ಪಟೇಲ್ ಪುಣ್ಯಸ್ಮರಣೋತ್ಸವದಲ್ಲಿ, ಬಿಜೆಪಿ ಸರ್ಕಾರದ ಮೂರು ಡಿಸಿಎಂ ಮಾಡೋ ವಿಚಾರವಾಗಿ ಮಾತನಾಡಿ, ಇನ್ನೂ ಮೂರು ಡಿಸಿಎಂ ಮಾಡುವುದು, ಸೋತವರಿಗೆ ಮಂತ್ರಿ ಗಿರಿ ನೀಡುವುದು, ಪ್ರಜಾಪ್ರಭುತ್ವಕ್ಕೆ ಅಗೌರವ ತೋರುವ ಆಲೋಚನೆ. ಈ ಪ್ರಕ್ರಿಯೆ ಇವತ್ತು ಬಿಜೆಪಿಯಲ್ಲಿ ನಡೆಯುತ್ತಿದೆ. ಇಂಥ ಬೆಳವಣಿಗೆ ಸರಿಯಲ್ಲ ಎಂದರು.
ಜೆ. ಎಚ್. ಪಟೇಲ್ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ರಾಜಕೀಯ ಧೃವೀಕರಣ ಕುರಿತು ಮಹಿಮಾ ಪಟೇಲ್ ಹೇಳಿಕೆ ಪ್ರತಿಕ್ರಿಯೆ ನೀಡಿ, ನಿಜಕ್ಕೂ ಮಹಿಮಾ ಪಟೇಲ್ರು ಹೇಳಿದ ಹಾಗೆ ರಾಜಕೀಯ ಮೌಲ್ಯಗಳು ಇಂದು ಕುಸಿದಿವೆ. ರಾಜಕೀಯದ ಗುಣಮಟ್ಟ ಅಧಃಪತನವಾಗಿದೆ. ಜನರ ಮನಸ್ಸನ್ನು ಮಲಿನಗೊಳಿಸಿ ಅಧಿಕಾರ ಹಿಡಿಯಬೇಕೆಂದು ಪ್ರಯತ್ನಿಸುತ್ತಿದ್ದಾರೆ. ಚಿಂತನೆಗಳು ನಡೆಯಬೇಕು, ಆದರೆ ಮಹಿಮಾ ಪಟೇಲ್ ಹೇಳಿರುವ ಹಾಗೆ ಯಾವ ರೀತಿ ಒಂದಾಗಬೇಕೋ ಗೊತ್ತಿಲ್ಲಾ.
ಆದರೆ ಅವರು ಆಡಿರುವ ಮಾತು, ಭಾವನೆಗಳು ಸೂಕ್ತವಾಗಿವೆ ಎಂದು ಪರ್ಯಾಯ ರಾಜಕೀಯದ ಹಾದಿಗೆ ಪಾಟೀಲ್ ಸಮರ್ಥನೆ ನೀಡಿದ್ರು.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಇಬ್ಬರ ರಾಜೀನಾಮೆ ಸ್ವೀಕಾರ ಮಾಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ರಾಜೀನಾಮೆ ಪ್ರಕ್ರಿಯೆ ಮುಗಿದ ಮೇಲೆ ಪ್ರತಿಕ್ರಿಯೇ ನೀಡುತ್ತೇನೆಂದು ಎಂದು ಹೇಳಿ ಜಾರಿಕೊಂಡರು.