ಗದಗ : ಕೊರೊನಾ ವೈರಸ್ ವಿಷಮ ಪರಿಸ್ಥಿತಿಯಿಂದ ಬುದ್ಧಿ ಕಲಿಯದ ಗದಗ ನಗರದ ಜನತೆಗೆ ಜಾಗೃತಿ ಮೂಡಿಸಲು ಖುದ್ದು ಗದಗನ ಶಾಸಕ ಹೆಚ್. ಕೆ. ಪಾಟೀಲ್ ಫೀಲ್ಡ್ ಗೆ ಇಳಿದಿದ್ದಾರೆ.
ಕೊರೊನಾ ಜಾಗೃತಿಗಾಗಿ ಫೀಲ್ಡ್ ಗೆ ಇಳಿದ ಶಾಸಕ: ಮಾಸ್ಕ್, ಸ್ಯಾನಿಟೈಸರ್ ವಿತರಣೆ
ನಗರದಲ್ಲಿ ಲಾಕ್ ಡೌನ್ ಜಾರಿಯಾದಾಗಿನಿಂದ ಜನಜಂಗುಳಿ ಸೇರಿ ಮತ್ತಷ್ಟು ಕೊರೊನಾ ಹರಡುವುದಕ್ಕೆ ಅನುವು ಮಾಡಿಕೊಡ್ತಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಅಧಿಕಾರಿ ಗಳು ಜನರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಕೇಳದ ಹಿನ್ನೆಲೆ ಜನತೆಗೆ ಜಾಗೃತಿ ಮೂಡಿಸಲು ಖುದ್ದು ಗದಗನ ಶಾಸಕ ಹೆಚ್. ಕೆ. ಪಾಟೀಲ್ ಫೀಲ್ಡ್ ಗೆ ಇಳಿದಿದ್ದಾರೆ.
ಶಾಸಕ ಹೆಚ್. ಕೆ. ಪಾಟೀಲ್ ಖುದ್ದಾಗಿ ಜನರ ಬಳಿ ಹೋಗಿ ಹೊರಗೆ ಬರದಂತೆ ಮನವಿ ಜೊತೆಗೆ ಜಾಗೃತಿ ಮೂಡಿಸಲು ನಗರದ ವಿವಿಧ ಬಡಾವಣೆಯಲ್ಲಿನ ಜನರಿಗೆ ತಿಳಿ ಹೇಳ್ತಿದ್ದಾರೆ. ಗದಗ, ಬೆಟಗೇರಿ ಭಾಗದ ನರಸಾಪೂರ ಬಡಾವಣೆಯಲ್ಲಿ ಎಚ್.ಕೆ. ಪಾಟೀಲ್ ಹಾಗೂ ಡಿ. ಆರ್. ಪಾಟೀಲ್ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿ, ಮನೆಯಿಂದ ಹೊರಗಡೆ ಬರಬೇಡ್ರಿ ಅಂತ ಮನವಿ ಮಾಡ್ತಿದ್ದಾರೆ.
ಕೊರೋನಾದಿಂದ ಭಯಬೇಡ ಆದ್ರೆ ಹರಡದಂತೆ ಎಚ್ಚರಿಕೆಯಿಂದ ಇರಿ ಅಂತ ಸೂಚಸಿದ್ದಾರೆ. ದಿನನಿತ್ಯದ ಜೀವನಕ್ಕೆ ಬೇಕಾಗುವ ದಿನಸಿ ವಸ್ತುಗಳು ತಮ್ಮ ಮನೆಯ ಬಾಗಿಲಿಗೆ ಬರುತ್ತವೆ, ಯಾರೂ ಕೊಡ ಮನೆಯಿಂದ ಹೊರಗೆ ಬರಬೇಡಿ ಎಂದು ತಿಳಿ ಹೇಳಿದ್ದಾರೆ.