ಗದಗ:ಗ್ರಾಮ ಪಂಚಾಯತಿ ಸದಸ್ಯರ ಪುತ್ರನೊಬ್ಬ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಗದಗ ತಾಲೂಕಿನ ಹರ್ಲಾಪುರದಲ್ಲಿ ನಡೆದಿದೆ.
ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯತಿ ಸದಸ್ಯೆ ಪುತ್ರ - ACB custody
ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತಿ ಸದಸ್ಯರ ಪುತ್ರನೊಬ್ಬ ಎಸಿಬಿ ಬಲೆಗೆ ಬಿದ್ದಿರೋ ಘಟನೆ ಗದಗ ತಾಲೂಕಿನ ಹರ್ಲಾಪುರದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿ ಸದಸ್ಯರ ಪುತ್ರನ ಲಂಚಾವಾತಾರ, ಎಸಿಬಿ ಬಲೆಗೆ ಬಿದ್ದ ಸದಸ್ಯರ ಪುತ್ರ..
ಗ್ರಾಮದ ವಾರ್ಡ್ ನಂಬರ್ 1ರ ಸದಸ್ಯೆ ನಾಗವ್ವ ಅನ್ನೊವವರ ಮಗನಾದ ಸಂತೋಷ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪ್ರಧಾನಮಂತ್ರಿ ವಸತಿ ಯೋಜನೆಯ ಫಲಾನುಭವಿ ವಿರೂಪಾಕ್ಷಿ ಅನ್ನೋರಿಂದ ಹಣ ಬಿಡುಗಡೆಗಾಗಿ 30 ಸಾವಿರ ಲಂಚದ ಬೇಡಿಕೆಯಿಟ್ಟಿದ್ದ ಎಂದು ತಿಳಿದು ಬಂದಿದೆ.
ಅದರಲ್ಲಿ 5 ಸಾವಿರ ಅಡ್ವಾನ್ಸ್ ರೂಪದಲ್ಲಿ ಪಡೆಯುವಾಗ ಸಂತೋಷ್ ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated : Oct 15, 2019, 6:58 AM IST