ಗದಗ : ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ವೈದ್ಯರು ಮತ್ತು ಸರಕಾರದ ಆಡಳಿತ ವೈಖರಿ ನಡುವೆ ತಿಕ್ಕಾಟ ಶುರುವಾಗಿದೆ. ವೈದ್ಯರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡ್ತಾನೆ ಬರ್ತಿದ್ದಾರೆ. ಈ ನಡುವೆ ಸಂಬಳದ ವಿಚಾರವಾಗಿ ಮತ್ತೆ ಆಕ್ರೋಶ ಹೊರಹಾಕುತ್ತಿದ್ದಾರೆ. CGHS ಸ್ಕೇಲ್ನಲ್ಲಿ ವೈದ್ಯರಿಗೆ ಸಂಬಳ ನೀಡಿ ಅಂತ ಬೀದಿಗಿಳಿಯಲು ತೀರ್ಮಾನಿಸಿದ್ದಾರೆ.
ಡಾಕ್ಟರ್ಸ್ V/s ಸರಕಾರ... ವೈದ್ಯರಿಗೆ ಸರಕಾರದ ಮೇಲಿನ ಮುನಿಸು ಇನ್ನೂ ತಣ್ಣಗಾಗಿಲ್ಲ! - ವೈದ್ಯರ ಪ್ರತಿಭಟನೆ
ಸರ್ಕಾರಿ ವೈದ್ಯರಿಗೆ ಸರ್ಕಾರದ ವೇತನ ತಾರತಮ್ಯ ವಿರೋಧಿಸಿ ವೈದ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೇರೆ ರಾಜ್ಯಗಳಲ್ಲಿ ಜಾರಿ ಇರುವ CGHS( Central Government Health Scheme) ವೇತನ ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.
![ಡಾಕ್ಟರ್ಸ್ V/s ಸರಕಾರ... ವೈದ್ಯರಿಗೆ ಸರಕಾರದ ಮೇಲಿನ ಮುನಿಸು ಇನ್ನೂ ತಣ್ಣಗಾಗಿಲ್ಲ! government doctors decided to protest](https://etvbharatimages.akamaized.net/etvbharat/prod-images/768-512-8799640-986-8799640-1600091438596.jpg)
ಕೆಲವು ದಿನಗಳಿಂದ ವೈದ್ಯಕೀಯ ಬೇರೆ ಬೇರೆ ಸಿಬ್ಬಂದಿ ಸಂಬಳ ಆಗಿಲ್ಲ. ಜತೆಗೆ ಕೊರೊನಾ ಸಂಬಂಧ ಯಾವುದೇ ಸುರಕ್ಷಿತ ವಸ್ತುಗಳನ್ನು ನೀಡುತ್ತಿಲ್ಲ ಅಂತ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿದ್ರು. ಈಗ ವೈದ್ಯರ ಸರದಿ. ವೈದ್ಯರು ಸಹ ಬೀದಿಗಿಳಿಯಲು ತೀರ್ಮಾನ ಮಾಡಿದ್ದಾರೆ. ಇದಕ್ಕೆ ಕಾರಣ ವೇತನ ತಾರತಮ್ಯ. ಸುಮಾರು 10 ರಿಂದ 15 ವರ್ಷ ಸೇವೆ ಸಲ್ಲಿಸಿದ ಹಿರಿಯ ವೈದ್ಯರು ಮತ್ತು ಹೊಸದಾಗಿ ಸೇವೆಗೆ ಸೇರಿರುವವರಿಗೂ ಒಂದೇ ಬೇಸಿಕ್ ಸಂಬಳ. ಇದು ಹಿರಿಯ ವೈದ್ಯರ ಅಸಮಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬೇರೆ ರಾಜ್ಯಗಳಲ್ಲಿ ಜಾರಿ ಇರುವ CGHS( Central Government Health Scheme)ಅಡಿ ವೇತನ ಜಾರಿಗೊಳಿಸುವಂತೆ ಒತ್ತಾಯ ಮಾಡ್ತಿದ್ದಾರೆ.
ನಾಳೆಯಿಂದ ರೋಗಿಗಳಿಗೆ ತೊಂದರೆಯಾಗದಂತೆ ಸೇವೆ ಸಲ್ಲಿಸಿ ಉಳಿದಂತೆ ಸರಕಾರಕ್ಕೆ ಸಲ್ಲಿಸಬೇಕಾಗಿರುವ ಅಂಕಿ ಅಂಶಗಳನ್ನ, ದಾಖಲೆಗಳನ್ನ, ರಿಪೋರ್ಟ್ಗಳನ್ನ ಕೊಡದೆ ಅಸಹಕಾರ ನೀಡಿ ಸರಕಾರದ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 21 ರವರೆಗೆ ಸರಕಾರದ ವಿರುದ್ಧ ಪ್ರತಿಭಟನೆ ಮುಂದುವರಿಯುತ್ತೆ. ಒಂದು ವೇಳೆ ಸರಕಾರ ಈ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಮೂಲಕ ಬೀದಿಗಳಿದು ಸೇವೆ ಸ್ಥಗಿತಗೊಳಿಸಿ ಉಗ್ರವಾದ ಪ್ರತಿಭಟನೆ ಮಾಡಲು ಮುಂದಾಗ್ತೇವೆ ಅಂತ ತಿಳಿಸಿದ್ದಾರೆ.
ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗೆ ಸೇವೆ ಸ್ಥಗಿತಗೊಳಿಸಿ ಮುಷ್ಕರಕ್ಕೆ ಮುಂದಾದ್ರೆ ಕೋವಿಡ್ ರೋಗಿಗಳಿಗೆ ತೊಂದರೆಯಾಗಬಹುದು. ಈಗಾಗಲೇ ಬೆಡ್ಗಳ ಕೊರತೆಯಿಂದ ಬಹಳಷ್ಟು ರೋಗಿಗಳು ಸಾವಿನ ದವಡೆಗೆ ಸಿಲುಕಿದ್ದಾರೆ. ಇದರ ಮಧ್ಯೆ ಇದೀಗ ವೈದ್ಯರು ಮುಷ್ಕರ ಪ್ರಾರಂಭಿಸಿದರೆ ಹೇಗೆ ಅಂತ ರೋಗಿಗಳು ಆತಂಕಕ್ಕೊಳಗಾಗಿದ್ದಾರೆ.