ಕರ್ನಾಟಕ

karnataka

ETV Bharat / state

ಇ-ಟೆಂಡರ್​ನಲ್ಲಿ ಗೋಲ್‌ಮಾಲ್.. ರೈತರು-ಖರೀದಿದಾರರ ನಡುವೆ ವಾಕ್ಸಮರ.. - Fight between Farmers aand buyers

ಇ- ಟೆಂಡರ್​ನಲ್ಲಿ ಆದ ಬೆಲೆಗಿಂತ ಕಡಿಮೆ ಬೆಲೆ ನೀಡಲು ಖರೀದಿದಾರರು ಮುಂದಾದಾಗ ರೈತರು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಇ-ಟೆಂಡರ್​ನಲ್ಲಿ ಗೋಲ್ಮಾಲ್,  Golmaal on e-Tender at Gadag APMC
ಇ-ಟೆಂಡರ್​ನಲ್ಲಿ ಗೋಲ್ಮಾಲ್

By

Published : Jan 12, 2020, 7:53 AM IST

ಗದಗ: ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ಇ-ಟೆಂಡರ್​ನಲ್ಲಿ ಗೋಲ್‌ಮಾಲ್ ಆಗಿದೆ. ರೈತರು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿಯೂ ನಡೆದಿದೆ.

ಇ-ಟೆಂಡರ್​ನಲ್ಲಿ ಆದ ಬೆಲೆಗಿಂತ ಕಡಿಮೆ ಬೆಲೆ ನೀಡಲು ಖರೀದಿದಾರರು ಮುಂದಾದಾಗ ರೈತರು ಹಾಗೂ ಖರೀದಿದಾರರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಎಪಿಎಂಸಿಯ ಎಂ ಎಂ ಕನವಳ್ಳಿ ಅವರ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ರೋಣ ತಾಲೂಕಿನ ಚಿಕ್ಕಮಣ್ಣೂರು ಗ್ರಾಮದ ರೈತ ಬಸವಲಿಂಗಪ್ಪ ಈಶ್ವರಪ್ಪ ಮೇಟಿ ಸೇರಿ ಮತ್ತೊಬ್ಬ ರೈತ ಮೋಸ ಹೋಗಿದ್ದಾರೆ.

ಇ-ಟೆಂಡರ್​ನಲ್ಲಿ ಗೋಲ್‌ಮಾಲ್‌..

ಇ-ಟೆಂಡರ್​ನಲ್ಲಿ ಇಬ್ಬರೂ ರೈತರದ್ದು ಕ್ರಮವಾಗಿ ಕ್ವಿಂಟಲ್​ಗೆ ₹13,175 ಹಾಗೂ 11, 250 ರೂಪಾಯಿಗಳಾಗಿದೆ. ಅವರಿಗೆ ಖರೀದಿದಾರರು,12,170 ರೂಪಾಯಿ ಹಾಗೂ 7, 200 ರೂಪಾಯಿಗಳನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ಕುಪಿತಗೊಂಡ ರೈತರು, ತಮಗೆ ಇ-ಟೆಂಡರ್​ನಲ್ಲಿ ಸಿಕ್ಕ ಬೆಲೆ ನೀಡುವಂತೆ ಆಗ್ರಹಿಸಿದಾಗ ಗಲಾಟೆ ನಡೆದಿದೆ.

ABOUT THE AUTHOR

...view details