ಗದಗ:ಮಹಾಮಾರಿ ಡೇಂಘಿ ಜ್ವರಕ್ಕೆ ಪುಟ್ಟ ಬಾಲಕಿ ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದಲ್ಲಿ ನಡೆದಿದೆ.
ಮುಂಡರಗಿಯಲ್ಲಿ ಮಹಾಮಾರಿ ಡೇಂಘಿ ಜ್ವರಕ್ಕೆ ಬಾಲಕಿ ಬಲಿ
ಮಹಾಮಾರಿ ಡೇಂಘಿ ಜ್ವರಕ್ಕೆ ಪುಟ್ಟ ಬಾಲಕಿ ಬಲಿಯಾಗಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದಲ್ಲಿ ನಡೆದಿದೆ.
Girl died
ಪಲ್ಲವಿ ಶಾಮಣ್ಣ ಸಾಲ್ಮನಿ (4) ಮೃತ ಬಾಲಕಿ. ಕಳೆದ ಒಂದು ವಾರದಿಂದ ಬಾಲಕಿ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗುತ್ತಿದೆ. ಇನ್ನು ಗ್ರಾಮದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೂ ಡೇಂಘಿ ಜ್ವರ ಕಾಣಿಸಿಕೊಂಡಿದ್ದು, ಸದ್ಯ ಇವರು ಧಾರವಾಡದ ಎಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಮುಂಜಾಗ್ರತ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.