ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪುರದಲ್ಲಿ ಕಳೆದ ನ.12ರಂದು ನಡೆದಿದ್ದ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಂಗಪ್ಪ ಅಲಿಯಾಸ್ ರಂಗಸ್ವಾಮಿ ಬಂಧಿತ ಆರೋಪಿ. ಈತ ಮುಂಡರಗಿ ತಾಲೂಕಿನ ಶಿರನಹಳ್ಳಿ ಗ್ರಾಮದ ನಿವಾಸಿ. ಕೊಲೆಯಾದ ಸೆಕ್ಯೂರಿಟಿ ಫಕೀರಪ್ಪ ಹಾಗೂ ಆರೋಪಿ ರಂಗಸ್ವಾಮಿಯ ಹೆಂಡತಿಗೆ ಅಕ್ರಮ ಸಂಬಂಧ ಇದೆ ಎಂದು ಶಂಕಿಸಿ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ ಯತೀಶ್ ಈ ಸಂಬಂಧ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ ಯತೀಶ್ ಅವರು ಆರೋಪಿ ರಂಗಸ್ವಾಮಿ ಮುಂಡರಗಿ ತಾಲೂಕಿನ ಶಿರನಹಳ್ಳಿ ಗ್ರಾಮದವನಾಗಿದ್ದು, ಗೌಂಡಿ ಕೆಲಸ ಮಾಡುತ್ತಾನೆ. ಅಕ್ರಮ ಸಂಬಂಧ ಹಿನ್ನೆಲೆ ಫಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಅಲ್ಲದೇ, ಕೊಲೆಯಾದ ವ್ಯಕ್ತಿ ಫಕೀರಪ್ಪ ಆರೋಪಿ ರಂಗಸ್ವಾಮಿಗೆ ದೂರದ ಸಂಬಂಧಿಯಾಗಿದ್ದು ಚಿಕ್ಕಪ್ಪನಾಗಬೇಕು ಎಂದು ತಿಳಿಸಿದರು.
ಫಕೀರಪ್ಪ ಶಿಂಗಟಾಲೂರು ಗ್ರಾಮದವನಾಗಿದ್ದು, ಗಂಗಾಪೂರ ಶುಗರ್ ಪ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನ.19 ರಂದು ರಾತ್ರಿ ಪ್ಯಾಕ್ಟರಿಯ ಗೊಬ್ಬರ ತಯಾರಿಸುವ ಬ್ಯಾಕರ್‌ನಲ್ಲಿ ಮಲಗಿದ್ದ ವೇಳೆ ಆರೋಪಿ ಫಕೀರಪ್ಪನ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದ. ಈ ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್.ಪಿ ಯತೀಶ್ ಮಾಹಿತಿ ನೀಡಿದರು.