ಕರ್ನಾಟಕ

karnataka

ETV Bharat / state

ಬಡತನ ಮೀರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಗುರಿ ಹೊಂದಿರುವ ಯುವತಿ.. - ಕುಸ್ತಿಯಲ್ಲಿ ಕಂಚು ಗೆದ್ದಿರುವ ಯುವತಿ

ತರಬೇತುದಾರ ಶರಣಗೌಡ ಬೇಲೇರಿಯವರು ಶ್ವೇತಾ ಬೆಳಗಟ್ಟಿ ಸೇರಿದಂತೆ 7 ರಿಂದ 8 ಕುಸ್ತಿ ಪಟುಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ವಿಶೇಷ ತರಬೇತಿ ನೀಡುತ್ತಿದಾರೆ. ಇದರಿಂದ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ..

Wrestler Shweta Bellagatti
ಕುಸ್ತಿಪಟು ಶ್ವೇತಾ ಬೆಳಗಟ್ಟಿ

By

Published : Oct 3, 2021, 7:18 PM IST

Updated : Oct 3, 2021, 7:42 PM IST

ಗದಗ :ಅಪ್ಪ ಇಲ್ಲದೆ ಅಮ್ಮನ ಆಸರೆಯಲ್ಲಿದ್ದರೂ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪದಕಗಳನ್ನ ಮುಡಿಗೇರಿಸಿಕೊಂಡಿರುವ ಜಿಲ್ಲೆಯ ಪ್ರತಿಭಾವಂತ ಯುವತಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರುವ ಭರವಸೆ ಹುಟ್ಟಿಸಿದಾರೆ.

ಕುಸ್ತಿಪಟು ಶ್ವೇತಾ ಬೆಳಗಟ್ಟಿ

ಹೆಸರು ಶ್ವೇತಾ ಬೆಳಗಟ್ಟಿ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರೋ ತರಬೇತಿ ಶಾಲೆಯಲ್ಲಿ ಕುಸ್ತಿ ಪಟ್ಟುಗಳನ್ನ ಕಲಿಯುತ್ತಿದಾರೆ. ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ರೂ ಕುಸ್ತಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಒಲವು ಹೊಂದಿದಾರೆ. ತರಬೇತುದಾರ ಶರಣಪ್ಪ ಬೇಲೇರಿ ಎಂಬುವರ ಗರಡಿಯಲ್ಲಿ ಸತತ 8 ವರ್ಷಗಳಿಂದ ಕುಸ್ತಿಯ ವಿವಿಧ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದಾರೆ.

ಕುಸ್ತಿಪಟು ಶ್ವೇತಾ ಬೆಳಗಟ್ಟಿ

ಸೆ.19ರಂದು ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಸತತ 2 ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದಾರೆ.

ಕುಸ್ತಿಪಟು ಶ್ವೇತಾ ಬೆಳಗಟ್ಟಿ
ಈ ಮೂಲಕ ದಕ್ಷಿಣ ಭಾರತದಲ್ಲಿ 23 ವರ್ಷದೊಳಗಿನ ಕುಸ್ತಿ ಪಂದ್ಯಾವಳಿಯಲ್ಲಿ ಎರಡು ಬಾರಿ ಮೆಡಲ್​​​​ ಗಳಿಸಿದ ಏಕೈಕ ಯುವತಿ ಎಂಬ ಹೆಗ್ಗೆಳಿಕೆಗೆ ಪಾತ್ರವಾಗಿದಾರೆ. ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಗುರಿಯನ್ನು ಶ್ವೇತಾ ಹೊಂದಿದಾರೆ.

ತರಬೇತುದಾರ ಶರಣಗೌಡ ಬೇಲೇರಿಯವರು ಶ್ವೇತಾ ಬೆಳಗಟ್ಟಿ ಸೇರಿದಂತೆ 7 ರಿಂದ 8 ಕುಸ್ತಿ ಪಟುಗಳನ್ನು ತಮ್ಮ ಮನೆಯಲ್ಲಿಯೇ ಇಟ್ಟುಕೊಂಡು ವಿಶೇಷ ತರಬೇತಿ ನೀಡುತ್ತಿದಾರೆ. ಇದರಿಂದ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಕುಸ್ತಿಪಟು ಶ್ವೇತಾ ಬೆಳಗಟ್ಟಿ

ವಿಶೇಷವಾಗಿ ಕೊರೊನಾ ಕಾಲದಲ್ಲಿ ತಮ್ಮ ಜಮೀನನಲ್ಲಿ ತರಬೇತಿ ನೀಡಿದಾರೆ. ಇದರ ಜೊತೆಗೆ ಸರ್ಕಾರ ಇಂತಹ ಬಡ ಕ್ರೀಡಾಪಟುಗಳ ಜೀವನ ಉತ್ತಮಗೊಳಿಸಲು ಎಲ್ಲಾ ಇಲಾಖೆಗಳಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಮನವಿ ಮಾಡಿದಾರೆ. ಒಂದು ಹಳ್ಳಿಯ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿ ಆಡಿ ದೇಶದ ಕೀರ್ತಿ ಹೆಚ್ಚಿಸಲಿ ಎಂಬುದು ಕ್ರೀಡಾಭಿಮಾನಿಗಳ ಆಶಯ.

ಇದನ್ನೂ ಓದಿ: ಮೀಸಲಾತಿ ವಿರೋಧಿಸುತ್ತಿದ್ದವರೇ ಈಗ ಮೀಸಲಾತಿ ಪರವಾಗಿದ್ದಾರೆ : ಸಿದ್ದರಾಮಯ್ಯ

Last Updated : Oct 3, 2021, 7:42 PM IST

ABOUT THE AUTHOR

...view details