ಕರ್ನಾಟಕ

karnataka

ETV Bharat / state

ವೈದ್ಯಕೀಯ​ ಕಾಲೇಜ್​ಗಳಲ್ಲಿ ಗದಗಕ್ಕೆ ಮೊದಲ ಸ್ಥಾನ... ಶೇ. 99.17 ಫಲಿತಾಂಶ ಪಡೆದ ಜಿಮ್ಸ್ - Jims College is the first in the state

ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆ( ಜಿಮ್ಸ್)ನ ಎಂಬಿಬಿಎಸ್ ವಿದ್ಯಾರ್ಥಿಗಳು ಶೇ. 99.17 ಫಲಿತಾಂಶ ಪಡೆಯುವ ಮೂಲಕ ಕರ್ನಾಟಕದಲ್ಲೇ ಮೊದಲ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಿಮ್ಸ್ ಕಾಲೇಜ್​
ಜಿಮ್ಸ್ ಕಾಲೇಜ್​

By

Published : Feb 6, 2020, 3:14 PM IST

Updated : Feb 6, 2020, 5:59 PM IST

ಗದಗ: ಮುದ್ರಣ ಕಾಶಿ ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್) ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳು ಅಮೋಘ ಸಾಧನೆ ಮೂಲಕ ಕರ್ನಾಟಕಕ್ಕೆ ಮೊದಲ ಶ್ರೇಣಿ ಪಡೆದಿದ್ದಾರೆ.‌

ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಮ್ಸ್ ಕಾಲೇಜ್​

122 ವಿದ್ಯಾರ್ಥಿಗಳ ಪೈಕಿ 121 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಶೇ. 100ಕ್ಕೆ, 99.17 ಫಲಿತಾಂಶ ಬಂದಿದ್ದು, ಇದು ಇಡೀ ಕರ್ನಾಟಕ ಮೆಡಿಕಲ್ ಇತಿಹಾಸದಲ್ಲಿ ಅತಿ ಹೆಚ್ಚು ಫಲಿತಾಂಶ ಬಂದಿರುವ ದಾಖಲೆಯನ್ನು ಗದಗ ವೈದ್ಯಕೀಯ ಕಾಲೇಜು ಮಾಡಿದೆ. ಅದರಲ್ಲೂ ಈ ವೈದ್ಯಕೀಯ ಕಾಲೇಜು 2015ರಲ್ಲಿ ಆರಂಭವಾಗಿದ್ದು, ಮೊದಲ ಬ್ಯಾಚ್​ನ ವಿದ್ಯಾರ್ಥಿಗಳೇ ಈ ಸಾಧನೆ ಮಾಡಿರುವುದು ವಿಶೇಷ.

ಶೇ 99.17 ಫಲಿತಾಂಶ ಪಡೆದಿರುವ ಕುರಿತು ಕಾಲೇಜು ಹೊರಡಿಸಿರುವ ಪ್ರತಿ

ನೀಟ್ ಪರೀಕ್ಷೆಯ ಮೆರಿಟ್ ಅಧಾರದ ಮೇಲೆ ಗದಗ ವೈದ್ಯಕೀಯ ಕಾಲೇಜು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಲ್ಲಿ ಹೊಸ ಕಾಲೇಜೆಂದು ಮೊದಲು ತಳಮಳಗೊಂಡಿದ್ದರು. ಅದರಲ್ಲೂ ಹಿಂದುಳಿದ ಪ್ರದೇಶದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಷ್ಟೊಂದು ಮೂಲ ಸೌಕರ್ಯ ಇಲ್ಲದಿದರೂ ವೈದ್ಯಕೀಯ ಇತಿಹಾಸದಲ್ಲಿ ನೂತನ ದಾಖಲೆ ಮಾಡಿರುವುದು ವಿಶಿಷ್ಟ ಸಾಧನೆಯಾಗಿದೆ.

Last Updated : Feb 6, 2020, 5:59 PM IST

ABOUT THE AUTHOR

...view details