ಕರ್ನಾಟಕ

karnataka

ETV Bharat / state

ಲಾಕ್​ ಡೌನ್​ ಆದೇಶ ಲೆಕ್ಕಿಸದೇ ಸಂಪ್ರದಾಯದಂತೆ ಯುಗಾದಿ ಆಚರಣೆ - ಗದಗದಲ್ಲಿ ಸಂಪ್ರದಾಯದಂತೆ ಯುಗಾದಿ ಹಬ್ಬ ಆಚರಣೆ

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಂದು ದೇವಸ್ಥಾನದ ಆವರಣದಲ್ಲಿ ಸಸಿ ಹುಡುಕುವ ಸಂಪ್ರದಾಯವಿದೆ. ಅದರಂತೆಯೇ ಗ್ರಾಮಸ್ಥರು ದೇವಸ್ಥಾನದ ಆವರಣಕ್ಕೆ ಬಂದು ಸಸಿ ಹುಡುಕಿ ಸಂಪ್ರದಾಯದಂತೆ ಹಬ್ಬ ಆಚರಿಸಿದ್ದಾರೆ.

Ugadi festival is celebrated Traditionally
ಸಂಪ್ರದಾಯದಂತೆ ಯುಗಾದಿ ಹಬ್ಬ ಆಚರಿಸದ ಗ್ರಾಮಸ್ಥರು

By

Published : Mar 25, 2020, 4:31 PM IST

ಗದಗ: ದೇಶಾದ್ಯಂತ ಲಾಕ್​ ಡೌನ್​ ಘೋಷಣೆಯಾಗಿದೆ. ಆದ್ರೆ ಸಂಪ್ರದಾಯವನ್ನು ಬಿಡದ ಗ್ರಾಮೀಣ ಭಾಗದ ಜನರು ಯುಗಾದಿ ಅಂಗವಾಗಿ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಸ್ಥಾನದಕ್ಕೆ ಬಂದು ಹಬ್ಬ ಅಚರಿಸಿದ್ದಾರೆ.

ಸಂಪ್ರದಾಯದಂತೆ ಯುಗಾದಿ ಹಬ್ಬ ಆಚರಿಸದ ಗ್ರಾಮಸ್ಥರು

ಅಬ್ಬಿಗೇರಿ ಗ್ರಾಮದ ಕಂಟಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಯುಗಾದಿ ಹಬ್ಬದಂದು ದೇವಸ್ಥಾನದ ಆವರಣದಲ್ಲಿ ಸಸಿ ಹುಡುಕುವ ಸಂಪ್ರದಾಯವಿದೆ. ದೇವಸ್ಥಾನದ ಆವರಣದಲ್ಲಿ ಯಾವ ಸಸಿ ಹೆಚ್ಚಾಗಿ ಸಿಗುತ್ತವೆಯೋ, ಆ ಸಸಿಗಳನ್ನು ಬೆಳೆದರೆ ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ಈ ಗ್ರಾಮದ ಜನರ ನಂಬಿಕೆಯಾಗಿದೆ.

ತಲೆ-ತಲಾಂತರದಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ಬಾರಿ ಹತ್ತಿ, ಜೋಳ, ಗೋಧಿ ಸಿಕ್ಕಿದ್ದು, ಮುಂದಿನ ವರ್ಷ ಅದೇ ಬೆಳೆಯನ್ನುಈ ಭಾಗದ ಜನರು ಬೆಳೆಯಲಿದ್ದಾರೆ.

ABOUT THE AUTHOR

...view details