ಕರ್ನಾಟಕ

karnataka

ETV Bharat / state

ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಹೆಚ್ಒ ಅವರಿಗೆ ಜಿಪಂ ಅಧ್ಯಕ್ಷರಿಂದ ಕ್ಲಾಸ್​​ - Corona Awareness

ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ‌100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಹರಡಿದೆ. ಇದಕ್ಕೆ ಆರೋಗ್ಯ ಇಲಾಖೆಯ ವೈಫಲ್ಯ ಕಾರಣ. ಇಷ್ಟು ದಿನ ನೆಮ್ಮದಿಯಿಂದ ಇದ್ದ ಹಳ್ಳಿಗಳಿಗೂ ಕೊರೊನಾ ವ್ಯಾಪಿಸಿದೆ. ಹಳ್ಳಿಹಳ್ಳಿಗಳಲ್ಲೂ ಹಿಂಡು ಹಿಂಡಾಗಿ ಕೊರೊನಾ ಆವರಿಸಿಕೊಳ್ತಿದೆ..

Gadag: zp president takes charge of DHO in progress review meeting
ಗದಗ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಹೆಚ್​​ಓ ವಿರುದ್ಧ ಜಿ.ಪಂ ಅಧ್ಯಕ್ಷರ ಕ್ಲಾಸ್​​

By

Published : Jun 29, 2020, 7:35 PM IST

ಗದಗ :ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರ್ತಿದೆ.

ಇದೇ ಹಿನ್ನೆಲೆಯಲ್ಲಿ ಇವತ್ತು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡರ ಮತ್ತು ಉಪಾಧ್ಯಕ್ಷೆ ಎಂ ವಿ ಬಿಚ್ಚೂರ ಇಬ್ಬರು ಸೇರಿ ಡಿಹೆಚ್ಒ​​ ಡಾ. ಸತೀಶ್ ಬಸರಿಗಿಡದ ಅವರಿಗೆ ತರಾಟೆಗೆ ತೆಗೆದುಕೊಂಡರು.

ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ‌100ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ಹರಡಿದೆ. ಇದಕ್ಕೆ ನೇರವಾಗಿ ಆರೋಗ್ಯ ಇಲಾಖೆಯ ವೈಫಲ್ಯ ಕಾರಣ ಎಂದರು. ಇಷ್ಟು ದಿನ ನೆಮ್ಮದಿಯಿಂದ ಇದ್ದ ಹಳ್ಳಿಗಳಿಗೂ ಕೊರೊನಾ ವ್ಯಾಪಿಸಿದೆ. ಹಳ್ಳಿಹಳ್ಳಿಗಳಲ್ಲೂ ಹಿಂಡು ಹಿಂಡಾಗಿ ಕೊರೊನಾ ಆವರಿಸಿಕೊಳ್ತಿದೆ.

ಆರೋಗ್ಯ ಇಲಾಖೆಯವರು ಸರಿಯಾಗಿ ಜನರಿಗೆ ಅರಿವು ಮೂಡಿಸ್ತಿಲ್ಲ. ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜನರಿಗೆ ತಿಳುವಳಿಕೆ ನೀಡುವಲ್ಲಿ ನೀವು ಹಿಂದೆ ಬಿದ್ದಿದ್ದೀರಿ. ಲಾಕ್​​ಡೌನ್ ತೆರುವಾದ ಬಳಿಕ ನಿಮ್ಮ ಕೆಲಸ ಆಮೆ ಗತಿಯಲ್ಲಿ ಸಾಗ್ತಿದೆ ಎಂದು ಡಿಹೆಚ್​​ಒ ಮೇಲೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹರಿಹಾಯ್ದರು.

ABOUT THE AUTHOR

...view details