ಎಸ್ಪಿ ಶಿವಪ್ರಕಾಶ್ ದೇವರಾಜು ಗದಗ:ನರಗುಂದ ತಾಲೂಕಿನ ಹದ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಭರತ್ ಎಂಬ ನಾಲ್ಕನೇ ತರಗತಿ ವಿದ್ಯಾರ್ಥಿನಿಯನ್ನು ಹೊಡೆದು ಕೊಂದು ಹಾಕಿದ ಅಥಿತಿ ಶಿಕ್ಷಕ ಮುತ್ತಪ್ಪ ಹಡಗಲಿಯನ್ನು ಮಂಗಳವಾರ ಬಂಧಿಸಿರುವುದಾಗಿ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದರು.
ತಾಯಿ ಮೇಲಿನ ಸಿಟ್ಟಿನಿಂದ ಅವರ ಮಗ ಭರತ್‌ನನ್ನು ಹೊಡೆದು ಕೊಲೆ ಮಾಡಿರುವುದಾಗಿ ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಅವರು ಮಾಹಿತಿ ನೀಡಿದರು. ಶಿಕ್ಷಕ ಮುತ್ತಪ್ಪನು 10 ವರ್ಷದ ಭರತ್ ಹಾಗೂ ಆತನ ತಾಯಿ ಗೀತಾ ಬಾರಕೇರ್ ಮೇಲೆ ಸೋಮವಾರ ಹಲ್ಲೆ ಮಾಡಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಭರತ್ ಮೃತಪಟ್ಟಿದ್ದು, ಗೀತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಶಾಲೆಯ ಶಿಕ್ಷಕ ಸಂಗನಗೌಡ ಪಾಟೀಲ್ ದೂರು ನೀಡಿದ್ದು, ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಸೋಮವಾರ ನಡೆದಿದ್ದೇನು? ಇದೇ ಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ, ಒಂದನೇ ಮಹಡಿಯಲ್ಲಿನ ನಾಲ್ಕನೇ ಕ್ಲಾಸ್ ರೂಂಗೆ ಹೋಗಿದ್ದಾನೆ. ಅಲ್ಲಿನ ಎಲ್ಲಾ ಮಕ್ಕಳನ್ನು ಒಳಗಡೆ ಕೂಡಿ ಕೀಲಿ ಹಾಕಿದ್ದಾನೆ. ಬಳಿಕ ನಾಲ್ಕನೇಯ ತರಗತಿ ಭರತ್ ಬಾರಕೇರ್ ಎನ್ನುವ ವಿದ್ಯಾರ್ಥಿಯನ್ನು ಸಲಿಕೆಯಿಂದ ಅಟ್ಟಾಡಿಸಿಕೊಂಡು ಹೊಡೆದು, ಮೇಲಿಂದ ಕೆಳಗಿ ದೂಕಿದ್ದಾನೆ.
ತಡೆಯಲು ಬಂದ ತಾಯಿ ಗೀತಾ ಹಾಗೂ ಇನ್ನೋರ್ವ ಶಾಲಾ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಭರತ್‌ನನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದ್ರೆ ಮಾರ್ಗಮಧ್ಯೆದಲ್ಲೇ ಆತನ ಮೃತಪಟ್ಟಿದ್ದ. ಘಟನೆ ಬಳಿಕ ಆರೋಪಿ ಮುತ್ತಪ್ಪ ಹಡಗಲಿ ಪರಾರಿಯಾಗಿದ್ದ. ಡಿಎಸ್ಪಿ ಈಗನಗೌಡರ್ ಅವರ ನೇತೃತ್ವದಲ್ಲಿ ತಂಡ ರಚಿಸಿ ಸೋಮವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.
ಇತ್ತೀಚೆಗೆ ಶಾಲಾ ಪ್ರವಾಸಕ್ಕೆ ಹೋದಾಗ ಶಾಲೆಯ ಮತ್ತೊಬ್ಬ ಶಿಕ್ಷಕರ ಜೊತೆ ಗೀತಾ ಸಲುಗೆಯಿಂದ ಇದ್ದರು. ಇವರ ಸಲುಗೆಯನ್ನು ಸಹಿಸಿಕೊಳ್ಳಲಾಗದ ಮುತ್ತಪ್ಪ ಹಡಗಲಿ ಹೊಟ್ಟೆಕಿಚ್ಚಿನಿಂದ ಈ ರೀತಿ ಕೃತ್ಯ ಮಾಡಿರುವುದು ಸದ್ಯದ ಮಾಹಿತಿ. ಆದರೆ ಈ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದೆ. ಭರತ್ನ ಕೊಲೆಗೆ ನಿಖರ ಕಾರಣ ಗೊತ್ತಾಗಿಲ್ಲ ಎಂದು ಮಾಹಿತಿ ನೀಡಿದರು.
ಏನಾದರೂ ಮಾಡಲೇಬೇಕು ಎಂಬ ಸಿಟ್ಟಿನಲ್ಲಿದ್ದಾಗ ಬಾಲಕ ಭರತ್ ಕಾಣಿಸಿಕೊಂಡಿದ್ದಾನೆ. ಹಾಗಾಗಿ ಆತನ ಮೇಲೆ ಹಲ್ಲೆ ಮಾಡಿ ಕಟ್ಟಡದ ಮೇಲಿನಿಂದ ದೂಕಿದ್ದಾನೆ. ತಡೆಯಲು ಬಂದವರ ಮೇಲೂ ಹಲ್ಲೆಗೈದಿದ್ದಾನೆ ಎಂಬುದು ಸದ್ಯದ ಮಾಹಿತಿ. ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಎಸ್ಪಿ ವಿವರಿಸಿದ್ದಾರೆ.
ಇದನ್ನೂ ಓದಿ:ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿ ಕೊಲೆ.. ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಬಾಲಕನ ತಾಯಿ ಸ್ಥಿತಿ ಗಂಭೀರ