ಗದಗ:ತನ್ನಹೆಗಲ ಮೇಲೆ ಹೊತ್ತು ಪ್ರಪಂಚ ತೋರಿಸಬೇಕಿದ್ದ ಅಪ್ಪ ಇಲ್ಲದಿದ್ದರೂ ಅಮ್ಮನ ಅಕ್ಕರೆ, ಅಣ್ಣನ ಪ್ರೋತ್ಸಾಹ ಹಾಗೂ ಶಿಕ್ಷಕರ ತೃಪ್ತಿದಾಯಕ ಮಾರ್ಗದರ್ಶನದಿಂದ ಇಂದು ಪಿಎಸ್ಐ ಫಲಿತಾಂಶದಲ್ಲಿ ಗ್ರಾಮೀಣ ಪ್ರತಿಭಾನ್ವಿತೆ ಸಹನಾ 26ನೇ ರ‍್ಯಾಂಕ್ ಪಡೆದಿದ್ದಾರೆ.
ಪಿಎಸ್ಐ ಹುದ್ದೆಗೇರಿದ ಗ್ರಾಮೀಣ ಪ್ರತಿಭೆ ಸಹನಾ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಗ್ಗಿನಭಾವನೂರು ಗ್ರಾಮದ ಸಹನಾ ಪಾಟೀಲ್ ಮಹಿಳಾ ವಿಭಾಗದ ಪಿಎಸ್ಐ ನೇಮಕಾತಿ ಪಟ್ಟಿಯಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅಪ್ಪನ ಪ್ರೀತಿಯಿಂದ ವಂಚಿತರಾದ ಸಹನಾ, ಇಬ್ಬರ ಅಣ್ಣಂದಿರ ನೆರಳಲ್ಲಿ ವಿದ್ಯಾಭ್ಯಾಸ ದೂಡಿದ್ದಳು. ದುರಂತ ಎಂಬಂತೆ ಕಳೆದ ವರ್ಷ ಅಪಘಾತವೊಂದರಲ್ಲಿ ಓರ್ವ ಅಣ್ಣನನ್ನು ಕಳೆದುಕೊಂಡ ಸಗನಾ, ದೃತಿಗೆಡದೇ ತನ್ನ ಓದು ಮುಂದುವರೆಸಿದ್ದಳು.
ಪಿಎಸ್ಐ ಹುದ್ದೆಗೇರಿದ ಗ್ರಾಮೀಣ ಪ್ರತಿಭೆ ಸಹನಾ ಮೂಲ ಸೌಲಭ್ಯಗಳಿಲ್ಲದ ಹಳ್ಳಿಯಲ್ಲಿ ಯಾವುದೇ ಕೋಚಿಂಗ್ ತೆಗೆದುಕೊಳ್ಳದೇ ಹಾಗೂ-ಹೀಗೂ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ್ದಳು. ಹಲವು ಅಡೆತಡೆ ಮೀರಿ ಪ್ರಾಥಮಿಕದಿಂದ ಪ್ರೌಢ ಶಿಕ್ಷಣದವರೆಗೆ ತೆಗ್ಗಿನಭಾವನೂರಿನ ಸರ್ಕಾರಿ ಶಾಲೆಯಲ್ಲಿಯೇ ವ್ಯಾಸಂಗ ಮುಗಿಸಿದ ಸಹನಾ, ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಶಿರಹಟ್ಟಿಯ ಖಾಸಗಿ ಕಾಲೇಜಿನಲ್ಲಿ ಪೂರೈಸಿದ್ದಳು.
ಪಿಎಸ್ಐ ಹುದ್ದೆಗೇರಿದ ಗ್ರಾಮೀಣ ಪ್ರತಿಭೆ ಸಹನಾ ಇನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಎಂಎ ಪದವಿ ಪಡೆದ ಸಾಧಕಿ ಸಹನಾ, ಲಾಕ್ಡೌನ್ ವೇಳೆ ಮನೆಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದಳು. ಹಳೆಯ ಪ್ರಶ್ನೆ ಪತ್ರಿಕೆ, ನೋಟ್ಸ್, ಮೊಬೈಲ್ನಲ್ಲಿ ವಿವಿಧ ವಿಷಯಗಳ ಮಾಹಿತಿ ಸಂಗ್ರಹ ಮಾಡುವುದು ಇವಳ ದಿನದ ಹವ್ಯಾಸವಾಗಿತ್ತು. ಹೀಗೆ... ಛಲ ಬಿಡದೇ ನಿರಂತರ ಓದಿದ ಸಹನಾ, ಇಂದು ಪಿಎಸ್ಐ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವ ಮೂಲಕ ಯುವಕರನ್ನು ನಾಚಿಸುವಂತೆ ಮಾಡಿ ತೋರಿಸಿದ್ದಾಳೆ.
ತಮ್ಮ ಜೀವನದ ವೃತ್ತಿ ಬದುಕಿನ ಕನಸನ್ನು ಹಲವಾರು ಅಡೆತಡೆ, ಕಷ್ಟಗಳ ಮಧ್ಯೆಯು ನನಸು ಮಾಡಿಕೊಂಡ ಸಹನಾಳ ಸಾಧನೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.