ಗದಗ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಯಾದಿಗಳ ನಡುವೆ ಗಲಾಟೆಯಾಗಿದ್ದು, ಮೂವರು ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ದಾಯಾದಿಗಳ ನಡುವೆ ಆಸ್ತಿ ವಿವಾದ.. ಮಾರಣಾಂತಿಕ ಹಲ್ಲೆ ಅನೀಲ್ ಪಾಟೀಲ್ ಎನ್ನುವಾತ 15 ಕ್ಕೂ ಹೆಚ್ಚು ಯುವಕರನ್ನು ಕರೆದುಕೊಂಡು ಬಂದು, ಸಹೋದರ ಸಂಬಂಧಿಗಳಾದ ಮಲ್ಲನಗೌಡ ಪಾಟೀಲ್, ಗಂಗನಗೌಡ ಪಾಟೀಲ್ ಹಾಗೂ ರುದ್ರೇಗೌಡ ಪಾಟೀಲ್ ಎನ್ನುವವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮೂವರನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನೀಲ್ ಪಾಟೀಲ್, ಬಸವರಾಜ್ ಕೌಳಿಕಾಯಿ, ಶಶೀಧರ ಕೌಳಿಕಾಯಿ, ಕೆಂಚನಗೌಡ ಪಾಟೀಲ್ ಸೇರಿದಂತೆ ಬೆಟಗೇರಿಯಿಂದ ರೌಡಿಗಳ ಗ್ಯಾಂಗ್ ಕರೆಸಿ, ಗಾಜಿನ ಬಾಟಲ್, ತಲ್ವಾರ, ಆಯುಧಗಳಿಂದ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜಮೀನು ವಿವಾದ ಕೋರ್ಟ್ನಲ್ಲಿ ಇರುವುದರಿಂದ ಅನೀಲ್ ಪಾಟೀಲ್ ಕುಟುಂಬ ಹಾಗೂ ಮಲ್ಲನಗೌಡ ಪಾಟೀಲ್ ನಡುವೆ ಮುಸುಕಿನ ಗುದ್ದಾಟ ಇತ್ತು. ಈ ಹಿನ್ನೆಲೆಯಲ್ಲಿ ಏಕಾಏಕಿ ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗಾಯಗೊಂಡ ಸಹೋದರರು ಆಗ್ರಹಿಸಿದ್ದಾರೆ.
ಈ ಕುರಿತು ಮುಂಡರಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀರು ಬಲೆ ಬಿಸಿದ್ದಾರೆ.