ಗದಗ: ಕೊರೊನಾ ಲಾಕ್ ಡೌನ್ ಯಶಸ್ವಿಯಾಗಿ ನಡೆಯಲು ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ರೆ ಕೇವಲ ಲಾಠಿ ಬೀಸಿ ಜನರನ್ನು ಹೊಡಿತಾರೆ ಅನ್ನೋವ್ರೆ ಹೆಚ್ಚು. ಅವರ ಕೆಲಸವನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದರೆ ಮನ ಕಲಕುವಂತಿದೆ.
ಬಿಸಿಲಿನಲ್ಲೇ ನಿಂತು ಉಪಹಾರ ಸೇವಿಸಿದ ಪೊಲೀಸ್ ಪೇದೆ - ಬಿಸಿಲಿನಲ್ಲಿಯೇ ನಿಂತು ಊಟ ಮಾಡಿದ ಪೊಲೀಸ್ ಪೇದೆ
ಗದಗದ ಶಹರ ಪೊಲೀಸ್ ಠಾಣೆ ಪೇದೆ ವೀರೇಶ್ ಮಣ್ಣೂರು ಎಂಬುವರು ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಕರ್ತವ್ಯದಲ್ಲಿದ್ದರು. ಉಪಹಾರ ಸೇವಿಸಲು ಬಿಡುವಿಲ್ಲದ್ದರಿಂದ ಬೇರೆಡೆ ತೆರಳದೇ ಸುಡು ಬಿಸಿಲಿನಲ್ಲಿಯೇ ನಿಂತು ಉಪಹಾರ ಸೇವಿಸಿದ್ದಾರೆ.
ಅತ್ತ ಕರ್ತವ್ಯಕ್ಕೂ ಚ್ಯುತಿ ಬರಬಾರದು. ಇತ್ತ ಹೊಟ್ಟೆನೂ ತುಂಬಬೇಕು ಅಂತ ಯಾರೂ ಯೋಚನೆ ಮಾಡ್ತಾರೆ?. ಊಟ ಮಾಡಿ ಆ ಮೇಲೆ ಬಂದ್ರೆ ಆಯ್ತು ಅಂತ ಯಾವುದೋ ಹೋಟೆಲ್ನಲ್ಲೋ ಕೂತು ಊಟ ಮಾಡುವವರೇ ಹೆಚ್ಚು. ಆದ್ರೆ ಇಲ್ಲೊಬ್ಬ ಪೊಲೀಸ್ ಪೇದೆ ಸುಡು ಬಿಸಿಲಿನಲ್ಲಿ ಸರ್ಕಲ್ನಲ್ಲಿ ನಿಂತು ಉಪಹಾರ ಸೇವನೆ ಮಾಡ್ತಿದ್ದಾರೆ.
ಗದಗದ ಶಹರ ಪೊಲೀಸ್ ಠಾಣೆ ಪೇದೆ ವೀರೇಶ್ ಮಣ್ಣೂರ ಎಂಬುವರು ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಕರ್ತವ್ಯದಲ್ಲಿದ್ದರು. ಉಪಹಾರ ಸೇವಿಸಲು ಬಿಡುವಿಲ್ಲದ್ದರಿಂದ ಬೇರೆಡೆ ತೆರಳದೇ ಸುಡು ಬಿಸಿಲಿನಲ್ಲಿಯೇ ನಿಂತು ಉಪಹಾರ ಸೇವಿಸಿದ್ದಾರೆ. ಜೊತೆಗೆ ಲಾಕ್ ಡೌನ್ ಉಲ್ಲಂಘಿಸಿ ಓಡಾಡುವ ಜನರನ್ನು ಕೂಡ ನಿಯಂತ್ರಿಸಿದ್ದಾರೆ.
TAGGED:
ಪೇದೆ ವೀರೇಶ್ ಮಣ್ಣೂರ