ಕರ್ನಾಟಕ

karnataka

ETV Bharat / state

ಮತ್ತೆ ಅದೇ ಹಾಡು,ಅದೇ ರಾಗ.. ಗದಗ ಮಾರ್ಕೆಟ್‌ನಲ್ಲಿ ಜನಜಂಗುಳಿ.. - ಗದಗ ಗ್ರೇನ್ ಮಾರುಕಟ್ಟೆ

ದಿನಸಿ ಹಾಗೂ ಕಿರಾಣಿ ಅಂಗಡಿಗಳ ಮುಂದೆ ಮುಗಿಬಿದ್ದಿರುವ ಜನ ಅಂತರ ಕಾಯ್ದುಕೊಳ್ಳದೇ ಬೇಜವ್ದಾರಿತನದಿಂದ ವರ್ತಿಸುತ್ತಿದ್ದಾರೆ.

Grean market
ಮಾರುಕಟ್ಟೆ

By

Published : Apr 11, 2020, 11:03 AM IST

ಗದಗ :ಕೊರೊನಾ ವೈರಸ್​ಗೆ ಗದಗನಲ್ಲಿ‌ 80 ವರ್ಷದ ವೃದ್ಧೆ ಸಾವನ್ನಪ್ಪಿರುವ ಹಿನ್ನೆಲೆ ಇಡೀ ನಗರದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರಂಗನವಾಡಿ ಮತ್ತು ಹಲವು ಏರಿಯಾಗಳನ್ನು ಜಿಲ್ಲಾಡಳಿತ ನಿಷೇಧಿತ ಪ್ರದೇಶಗಳಾಗಿ ಕನ್ವರ್ಟ್​ ಮಾಡಿದೆ. ಆದರೆ‌, ಇಷ್ಟೆಲ್ಲಾ ಆದರೂ ನಗರದ ಜನತೆ ಇನ್ನೂ ಬುದ್ಧಿ ಕಲಿತಿಲ್ಲಾ.

ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದಿರುವ ಜನ..

ಗದಗ ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿ ನಿಂತು ಅಗತ್ಯ ವಸ್ತುಗಳ ಖರೀದಿ ಮಾಡ್ತಿದ್ದಾರೆ. ದಿನಸಿ ಹಾಗೂ ಕಿರಾಣಿ ಅಂಗಡಿಗಳ ಮುಂದೆ ಮುಗಿಬಿದ್ದಿರುವ ಜನ ಅಂತರ ಕಾಯ್ದುಕೊಳ್ಳದೇ ಬೇಜವ್ದಾರಿತನದಿಂದ ವರ್ತಿಸುತ್ತಿದ್ದಾರೆ.

ಅಲ್ಲದೇ ಗದಗನಲ್ಲಿ ವಾರಕ್ಕೆ ಎರಡು ದಿನ ಮಾತ್ರ ದಿನಸಿ, ಕಿರಾಣಿ ಅಂಗಡಿಗಳನ್ನ ತೆರೆಯಬೇಕು ಅನ್ನೋ ಆದೇಶವಿದೆ. ಇಷ್ಟಿದ್ರೂ ಪೊಲೀಸರು, ಅಧಿಕಾರಿಗಳು ಸಾಕಷ್ಟು ತಿಳುವಳಿಕೆ ನೀಡಿದ್ರೂ ಸಹ ಜನ ಮಾತ್ರ ಡೋಂಟ್‌ಕೇರ್ ಅಂತಿದ್ದಾರೆ. ಇದೀಗ ಜನರನ್ನ ನಿಯಂತ್ರಿಸೋದು ಪೊಲೀಸ್ ಸಿಬ್ಬಂದಿಗೆ ದೊಡ್ಡ ತಲೆನೋವಾಗಿದೆ.

ABOUT THE AUTHOR

...view details