ಗದಗ:ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ನಗರದ ಗಾಂಧಿ ವೃತ್ತದಲ್ಲಿ ಹೋಟೆಲ್ ಮಾಲೀಕರೊಬ್ಬರು ಆಹಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಾಗೆಗಳಿಗೆ ಆಹಾರ ನೀಡಿ ಮಾನವಿಯತೆ ಮೆರೆದ ಹೋಟೆಲ್ ಮಾಲೀಕ - Gadag people humanity
ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಿಗದೇ ಪರದಾಡುತ್ತಿದ್ದ ಕಾಗೆಗಳಿಗೆ ಗದಗ ನಗರದ ಹೋಟೆಲ್ ಮಾಲೀಕರೊಬ್ರು ಆಹಾರ ನೀಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಸಿವಿನಿಂದ ಬಳಲೋ ನೂರಾರು ಕಾಗೆಗೆ ಆಹಾರ ನೀಡಿ ಮಾನವಿಯತೆ...
ಕೊರೊನಾ ವೈರಸ್ ತಡೆಗೆ 21 ದಿನಗಳ ಕಾಲ ಲಾಕ್ಡೌನ್ ಜಾರಿಯಾಗಿದೆ. ಆದರೆ, ಇದರ ಪರಿಣಾಮ ಪಕ್ಷಿ-ಪ್ರಾಣಿಗಳಿಗೂ ತಟ್ಟಿದೆ.
ತಮ್ಮ ಹೋಟೆಲ್ನಲ್ಲಿದ ಮಂಡಕ್ಕಿ, ದಾಣಿಯನ್ನು ಕಾಗೆಗಳಿಗೆ ಹಾಕಿ ಅವುಗಳ ಹಸಿವು ನೀಗಿಸಿದ್ದಾರೆ. ದಿನಾಲೂ ನೂರಾರು ಕಾಗೆಗಳು ಆಹಾರ ಸ್ವೀಕರಿಸುತ್ತಿವೆ. ಹೋಟೆಲ್ ಮಾಲೀಕರ ಈ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.