ಗದಗ: ನಗರದಲ್ಲಿ ಈಗಾಗಲೇ ಕೊರೊನಾಗೆ ವೃದ್ಧೆ ಬಲಿಯಾಗಿದ್ರೂ ಸಹ ಜನರಿಗೆ ಬುದ್ಧಿ ಬಂದಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳೋಕೆ ಜನರೇಕೋ ಮನಸ್ಸೇ ಮಾಡ್ತಿಲ್ಲ.
ಮಾಸ್ಕ್ ಬಂಗಾರ, Distance ಬೆಳ್ಳಿ ಅಂದರೂ ಕೇಳುತ್ತಿಲ್ಲ! ನಿಯಮ ಮೀರಿ ಮಾಂಸಕ್ಕೆ ಮುಗಿಬಿದ್ದರು
ಭಾನುವಾರವಾದ್ದರಿಂದ ಜನರಿಗೆ ಮಾಂಸ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಾಂಸದ ಅಂಗಡಿಗಳ ಮುಂದೆ ಜನರು ಕೊರೊನಾವನ್ನೂ ಲೆಕ್ಕಿಸದೆ ಮುಗಿಬಿದ್ದು ಖರೀದಿ ಮಾಡಿದರು.
ಮಾಂಸಕ್ಕೆ ಮುಗಿಬಿದ್ದು ಖರೀದಿ
ಇಂದು ಭಾನುವಾರವಾದ್ದರಿಂದ ಜನರಿಗೆ ಮಾಂಸ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿತ್ತು. ಆದರೆ, ಜನರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮಾಂಸ ಖರೀದಿಗೆ ಮುಗಿಬಿದ್ದದ್ದು ಕಂಡುಬಂತು.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಮನವಿಗೂ ಸಹ ಜನರು ಕ್ಯಾರೆನ್ನುತ್ತಿಲ್ಲ. ಪೊಲೀಸರು ಎಷ್ಟೇ ಬುದ್ದಿವಾದ ಹೇಳಿದರೂ ಕೂಡ ತಮ್ಮ ಪಾಡಿಗೆ ತಾವು ಖರೀದಿಯಲ್ಲಿ ತೊಡಗಿದ್ದರು.