ಕರ್ನಾಟಕ

karnataka

ETV Bharat / state

ನರಗುಂದದಲ್ಲಿ ನೇಣಿಗೆ ಶರಣಾದ ಯೋಧ - ಗದಗ ನರಗುಂದ ಬೆಳ್ಳೇರಿ ಸೈನಿಕ ಆತ್ಮಹತ್ಯೆ ಸುದ್ದಿ

ಮರಕ್ಕೆ ನೇಣು ಬಿಗಿದುಕೊಂಡು ಯೋಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದಲ್ಲಿ ನಡೆದಿದೆ. ಕುಟುಂಬ ಸದಸ್ಯರೊಂದಿಗಿನ ವೈಮನಸ್ಸೇ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ.

gadag-naragunda-bellery-soilder-suicide
ಮರಕ್ಕೆ ನೇಣು ಬಿಗಿದುಕೊಂಡು ಯೋಧನ ಆತ್ಮಹತ್ಯೆ

By

Published : Dec 26, 2019, 7:32 AM IST

ಗದಗ: ಯೋಧನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದಲ್ಲಿ ನಡೆದಿದೆ.

ಮಹಾಂತೇಶ ಮೇಟಿ (25) ಮೃತ ಸೈನಿಕ. ಗ್ರಾಮದ ಹೊರವಲಯದ ಜಮೀನೊಂದರ ಮರದಲ್ಲಿ ನೇಣಿಗೆ ಶರಣಾಗಿದ್ದಾನೆ. ಕುಟುಂಬ ಸದಸ್ಯರೊಂದಿಗಿನ ವೈಮನಸ್ಸೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆಯಾದರೂ, ನಿಖರ ಮಾಹಿತಿ ತಿಳಿದುಬಂದಿಲ್ಲ.

ಮರಕ್ಕೆ ನೇಣು ಬಿಗಿದುಕೊಂಡು ಯೋಧ ಆತ್ಮಹತ್ಯೆ

ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details