ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಎಪಿಎಂಸಿ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ವೇಳೆ, ಶಾಸಕರು ಹಾಗೂ ತಹಶೀಲ್ದಾರರಿಂದ ಸಾಮಾಜಿಕ ಅಂತರ ಸಮಾಜಕ್ಕೆ ಯಾಕೆ ಎನ್ನುವ ಭಾವನೆ ಮೂಡುವಂತಿತ್ತು.
ಬಿಜೆಪಿ ಬೆಂಬಲಿತ ನೀಲಪ್ಪ ಹತ್ತಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೋಮಣ್ಣ ಎಂಬುವವರು ಆಯ್ಕೆಯಾಗಿದ್ದಾರೆ. ಈ ವೇಳೆ ಅಪಾರ ಅಭಿಮಾನಿಗಳ ಬಳಗ, ಕಾರ್ಯಕರ್ತರ ವೃಂಧ ಕೊರೊನಾ ಸೋಂಕಿನ ಭಯವಿಲ್ಲದೆ ಸಾಮಾಜಿಕ ಅಂತರ ನಮಗ್ಯಾಕೆ, ಮಾಸ್ಕ್ ಇನ್ಯಾಕೆ ಎನ್ನುವಂತಿದ್ದರು.