ಕರ್ನಾಟಕ

karnataka

ETV Bharat / state

3 ದಿನ ಕಳೆದರೂ ಮೃತದೇಹ ಹಸ್ತಾಂತರಿಸದ ಜಿಮ್ಸ್​ : ಹೆಚ್​.ಕೆ.ಪಾಟೀಲ್ ಆಕ್ರೋಶ - MLA HK Patil outrage

ವಿವಿಧ ಕಾರಣಗಳಿಂದ ಮೃತಪಟ್ಟ ಮೂವರ ಮಾದರಿಯನ್ನು ಕೊರೊನಾ ಪರೀಕ್ಷೆಗೆ ರವಾನಿಸಲಾಗಿದೆ. ಮೂರು ದಿನ ಕಳೆದರೂ ಮೃತದೇಹಗಳನ್ನು ಹಸ್ತಾಂತರಿಸದ ಕಾರಣ ಮಾಜಿ ಸಚಿವ ಹೆಚ್​.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

gadag
ಜಿಮ್ಸ್ ಸಿಬ್ಬಂದಿ ವಿರುದ್ಧ ಆಕ್ರೋಶ

By

Published : Apr 18, 2020, 4:20 PM IST

ಗದಗ: ಜಿಲ್ಲೆಯ ಮೂರು ಜನ ಬೇರೆ ಬೇರೆ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಜಿಲ್ಲೆಯ ಜಿಮ್ಸ್ ವೈದ್ಯರು ಮೂವರು ಮೃತರ ಮಾದರಿಯನ್ನು ಕೋವಿಡ್- 19 ಟೆಸ್ಟ್​​ಗೆ ಕಳಿಸಿದ್ದಾರೆ. ಮರಣಹೊಂದಿ ಮೂರು ದಿನಗಳಾಗಿದ್ದು, ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿಲ್ಲ ಎಂದು ಶಾಸಕ ಹೆಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಹೆಚ್.ಕೆ ಪಾಟೀಲ್ ಹೇಳಿಕೆ

ಬೇರೆ ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ ಎನ್ನೋದು ಗೊತ್ತಿದ್ದರೂ ಸಹ ಅವರ ಮೃತದೇಹಗಳನ್ನು ಹಸ್ತಾಂತರ ಮಾಡುತ್ತಿಲ್ಲ. ವರದಿ ತರಿಸುವಲ್ಲಿ ನಿಧಾನಗತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಸಮಸ್ಯೆಗಳು ಆಗಬಾರದು ಎಂದು ಜಿಮ್ಸ್​ಗೆ​ ಟೆಸ್ಟಿಂಗ್ ಲ್ಯಾಬ್ ಮಂಜೂರು ಮಾಡಿ ಎಂದು ಒತ್ತಾಯ ಮಾಡಿದ್ದೇನೆ. ಆದರೆ ಸರ್ಕಾರ ಮಾತ್ರ ಇತ್ತ ಗಮನ ನೀಡುತ್ತಿಲ್ಲ ಎಂದು ಹೆಚ್.ಕೆ ಪಾಟೀಲ್ ಅಸಮಾಧಾನ ಹೊರ ಹಾಕಿದ್ದಾರೆ.

ಮತ್ತೊಂದೆಡೆ ಮೃತರ ಕುಟುಂಬದವರು ನಮ್ಮ ನೋವು ಜಿಮ್ಸ್ ಸಿಬ್ಬಂದಿಗೆ ಕಾಣುತ್ತಿಲ್ಲವೇ ಎಂದು ಹಾಕುತ್ತಿದ್ದಾರೆ.

ABOUT THE AUTHOR

...view details