ಗದಗ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಿಮ್ಸ್ ಆಸ್ಪತ್ರೆಯಲ್ಲಿ ನಾನಾ ಸಮಸ್ಯೆಗಳು ಎದುರಾಗುತ್ತಿವೆ.
ಗದಗ: ಜಿಮ್ಸ್ನಲ್ಲೂ ಬೆಡ್ ಸಮಸ್ಯೆ, ರೋಗಿಗಳ ಪರದಾಟ - Gadag GIMS hospital
ಗದಗ ಜಿಲ್ಲೆಯ ಜಿಮ್ಸ್ ಆಸ್ಪತ್ರೆಯಲ್ಲೂ ಹಲವಾರು ಸಮಸ್ಯೆಗಳು ಇವೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಜಿಲ್ಲಾಡಳಿತ ಮಾತ್ರ ಸಮಜಾಯಿಷಿ ನೀಡುತ್ತಿದೆ.
ಜಿಮ್ಸ್ನಲ್ಲೂ ಬೆಡ್ ಸಮಸ್ಯೆ
ಒಂದೆಡೆ ಜಿಲ್ಲಾಡಳಿತ ನಮ್ಮಲ್ಲಿ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಬೆಡ್ ಯಾವುದೇ ಸಮಸ್ಯೆಗಳಿಲ್ಲ ಎಂದು ಹೇಳಿಕೊಳ್ಳುತ್ತಿದೆ. ಆದರೆ ಜಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಬೆಡ್ಗಳು ಫುಲ್ ಆಗಿವೆ.
ಜಿಮ್ಸ್ಗೆ ಬರುವ ರೋಗಿಗಳು ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಜಿಮ್ಸ್ನಲ್ಲಿ 358 ಬೆಡ್ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಒಟ್ಟು 58 ಬೆಡ್ಗಳಲ್ಲಿ 20 ಆಕ್ಸಿಜನ್, 38 ವೆಂಟಿಲೇಟರ್ ಬೆಡ್ಗಳು ಇವೆ. ಆದರೆ ನೂರಾರು ರೋಗಿಗಳಿಗೆ ವೆಂಟಿಲೇಟರ್ ಅವಶ್ಯಕತೆ ಇದೆ. ಜಿಲ್ಲಾಡಳಿತ ಮಾತ್ರ ಸಮಜಾಯಿಷಿ ನೀಡುತ್ತಿದೆ ಎನ್ನಲಾಗಿದೆ.