ಕರ್ನಾಟಕ

karnataka

ETV Bharat / state

ಪೊಲೀಸ್ರು ತೊಂದ್ರೆ ಕೊಡ್ತಾರೆ, ನಾವು ಕೆಲಸ ಮಾಡಲ್ಲ: ಗದಗ ಆರೋಗ್ಯ ಸಿಬ್ಬಂದಿ ಪ್ರತಿಭಟನೆ - ಗದಗದಲ್ಲಿ ಕೊರಾನಾ ಎಫೆಕ್ಟ್​

ಪೊಲೀಸರು ತೊಂದ್ರೆ ಕೊಡ್ತಾರೆ ಎಂದು ಗದಗ ಆರೋಗ್ಯ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

asds
ಗದಗ ಆರೋಗ್ಯ ಸಿಬ್ಬಂದಿ ಪ್ರತಿಭಟನೆ

By

Published : Apr 16, 2020, 12:45 PM IST

ಗದಗ: ಕೆಲಸಕ್ಕೆ ಬರುವ ಆರೋಗ್ಯ ಇಲಾಖೆ ಸಿಬ್ಬಂದಿಗೆ ಪೊಲೀಸರು ತೊಂದ್ರೆ ಕೊಡ್ತಾರೆ. ಹೀಗಾಗಿ ನಾವು ಕೆಲಸ ಮಾಡಲ್ಲವೆಂದು ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ.

ಗದಗ ಆರೋಗ್ಯ ಸಿಬ್ಬಂದಿ ಪ್ರತಿಭಟನೆ

ನಗರದ ಮಹತ್ಮ ಗಾಂಧಿ ವೃತ್ತದ ಬಳಿ ಇರುವ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಬರುತ್ತಾರೆ. ಆದರೆ ಮಾರ್ಗ ಮಧ್ಯದಲ್ಲಿ ಐಡಿ ಕಾರ್ಡ್​​ ತೋರಿಸಿದರು ಪೊಲೀಸರು ವಾಹನ ಸೀಜ್ ಮಾಡ್ತಾರೆ, ಹಲ್ಲೆಗೆ ಯತ್ನಿಸುತ್ತಾರೆ. ಲಾಕ್​ಡೌನ್ ಸಮಯದಿಂದಲೂ ಈ ಕಷ್ಟ ಅನುಭವಿಸ್ತಾ ಇದ್ದೇವೆ ಎಂದರು.

ಜೀವದ ಹಂಗು ತೊರೆದು ಕಂಟೈನ್​ಮೆಂಟ್ ಏರಿಯಾಕ್ಕೆ ಹೋಗಿ ಸರ್ವೆ ಮಾಡಿಕೊಂಡು ಬರುತ್ತೇವೆ. ನಮ್ಮ ಡಾಕ್ಟರ್ ಹೆಸರು ಹೇಳಿದರು ಕಿಮ್ಮತ್ತು ಕೊಡಲ್ಲಾ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್​ಪಿ ಎಸ್ ಪ್ರಹ್ಲಾದ್​ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ABOUT THE AUTHOR

...view details