ಗದಗ:ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲ ಎನ್ನುವಂತಾಗಿದೆ.
ಥೂ ಇದೂ ಒಂದ್ ಆಸ್ಪತ್ರೆನಾ.. ನೆಲದ ಮೇಲೆ ರೋಗಿ, ಡ್ರಿಪ್ ಕೈಯಲ್ಲೇ ಹಿಡಿದ ಅಜ್ಜಿ..
ಕಾರಿಡಾರ್ನಲ್ಲೇ ಮಕ್ಕಳಿಗೆ ಡ್ರಿಪ್ ಹಾಕ್ತಾರೆ. ಹಾಸಿಗೆ ಇಲ್ಲದೆ ರೋಗಿಗಳನ್ನು ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ ನೀಡ್ತಾರೆ.
ಗದಗ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ
ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಯಲ್ಲಿ ಜ್ವರದಿಂದ ಬಳಲುತ್ತಿರುವ ಅಜ್ಜಿಯೊಬ್ಬರು ತನ್ನ ಕೈಯಲ್ಲೇ ಡ್ರಿಪ್ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಮತ್ತೊಂದೆಡೆ ಕಾರಿಡಾರ್ನಲ್ಲೇ ಮಕ್ಕಳಿಗೆ ಡ್ರಿಪ್ ಹಾಕಲಾಗ್ತಿದೆ. ಹಾಸಿಗೆ ಇಲ್ಲದೆ ರೋಗಿಯೊಬ್ಬನನ್ನು ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ ನೀಡಲಾಗ್ತಿದೆ.
ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಈ ಸ್ಥಿತಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.