ಕರ್ನಾಟಕ

karnataka

ETV Bharat / state

ಗದಗ ಕೊರೊನಾ ಆಸ್ಪತ್ರೆ ಫುಲ್.. ಮೊರಾರ್ಜಿ ವಸತಿ ಶಾಲೆಯಲ್ಲಿ ಬೆಡ್ ವ್ಯವಸ್ಥೆ - Gadaga latest news

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 583ಕ್ಕೆ ಏರಿಕೆಯಾಗಿದೆ. ಸೋಂಕಿಗೆ 14 ಜನ ಬಲಿಯಾಗಿದ್ದಾರೆ..

Gadaga
Gadaga

By

Published : Jul 20, 2020, 3:01 PM IST

ಗದಗ :ಜಿಲ್ಲೆಯ 117 ಬೆಡ್ ಸಾಮರ್ಥ್ಯದ ಜಿಮ್ಸ್ ನ ಆಯುಷ್ ಇಲಾಖೆಯ ಕೋವಿಡ್-19 ಆಸ್ಪತ್ರೆ ಫುಲ್ ಆಗಿದೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 200 ಬೆಡ್ ವ್ಯವಸ್ಥೆ ಮಾಡಿದೆ. ಈಗಾಗಲೇ 130 ರೋಗಿಗಳನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ್ ಬಾಬು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 583ಕ್ಕೆ ಏರಿಕೆಯಾಗಿದೆ. ಸೋಂಕಿಗೆ 14 ಜನ ಬಲಿಯಾಗಿದ್ದಾರೆ. ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಆಯಾ ತಾಲೂಕಿನ ಊರಾಚೆ ಇರುವ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪಾಸಿಟಿವ್ ದೃಢವಾದರನ್ನು ಮಾತ್ರ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details