ಗದಗ:ಕಿವಿ ಚಿಕಿತ್ಸೆಗೆಂದು ಬಂದ ಮಹಿಳೆ ಸಾವನ್ನಪ್ಪಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಗದಗ ತಾಲೂಕಿನ ಕಣವಿ-ಹೊಸೂರು ಗ್ರಾಮದ ಸುಮಿತ್ರಾ ಬಡಿಗೇರ (35) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:ಸುಮಿತ್ರಾ ಬಡಿಗೇರ ಎಂಬುವವರು ಹೊಸ ಚಿನ್ನದ ಕಿವಿಯೋಲೆ ತಂದಿದ್ದರಂತೆ. ಆದ್ರೆ ಕಿವಿ ರಂಧ್ರಗಳು ಹಿರಿದಾಗಿದ್ದು ಕಿವಿಯೋಲೆಗಳು ಕಳಚಿ ಬೀಳುವಂತಿದ್ದವಂತೆ. ಹೀಗಾಗಿ, ಶಸ್ತ್ರಚಿಕಿತ್ಸೆಯ ಮೂಲಕ ಕಿವಿ ರಂಧ್ರ ಮುಚ್ಚಿಸಿಕೊಳ್ಳಲು ಜಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಇದೇ ವೇಳೆ ವೈದ್ಯರು ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮಹಿಳೆ ದಿಢೀರ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಮಹಿಳೆಯ ಪತಿ ಮತ್ತು ಕುಟುಂಬಸ್ಥರನ್ನು ಕೆರಳಿಸಿದ್ದು, ಚಿನ್ನದ ಓಲೆಯನ್ನ ತೊಡಬೇಕೆನ್ನುವ ಧಾವಂತದಲ್ಲಿ ಚಿಕಿತ್ಸೆಗೆ ಬಂದು ವೈದ್ಯರ ನಿರ್ಲಕ್ಷ್ಯಕ್ಕೆ ನನ್ನ ಪತ್ನಿ ಬಲಿಯಾಗಿದ್ದಾಳೆ ಎಂದು ಪತಿ ಮಂಜುನಾಥ್ ಆರೋಪಿಸಿದ್ದಾರೆ.
ಪತ್ನಿಯ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿರುವ ಪತಿ ಮಂಜುನಾಥ್ ಆ್ಯಂಬುಲೆನ್ಸ್ ಚಕ್ರದಡಿ ಸಿಲುಕಿ ಆತ್ಮಹತ್ಯೆಗೂ ಯತ್ನಿಸಿದ್ದಾರೆ.