ಕರ್ನಾಟಕ

karnataka

ETV Bharat / state

ವಿಘ್ನ ವಿನಾಶಕನಿಗೆ ಪ್ರವಾಹದ ವಿಘ್ನ... ಮಧ್ಯಾಹ್ನವೇ ಗಣೇಶ ನಿಮಜ್ಜನ - Gadag District Konnura village

ಪ್ರವಾಹ ಭೀತಿ ಇರುವುದರಿಂದ ರಾತ್ರಿ ನಿಮಜ್ಜನ ಮಾಡಬೇಕಿದ್ದ ಗಣೇಶನನ್ನು ಮಧ್ಯಾಹ್ನವೇ ನದಿಯಲ್ಲಿ ಬಿಡಲಾಗಿದೆ.

ಮಧ್ಯಾಹ್ನವೇ ಗಣೇಶ ನಿಮಜ್ಜನ

By

Published : Sep 6, 2019, 5:54 PM IST

ಗದಗ:ಪ್ರವಾಹ ಭೀತಿ ಹಿನ್ನೆಲೆ ರಾತ್ರಿ ನಿಮಜ್ಜನವಾಗಬೇಕಿದ್ದ ಗಣೇಶನನ್ನು ಮಧ್ಯಾಹ್ನವೇ ನದಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಪ್ರತಿ ವರ್ಷ ಕೊಣ್ಣೂರ ಗ್ರಾಮದಲ್ಲಿ ಐದು ದಿನಗಳ ಕಾಲ ಗಣೇಶ ಪೂಜೆ ನೆರವೇರಿಸಿ ಐದನೇ ದಿನ ರಾತ್ರಿ ನಿಮಜ್ಜನ ಮಾಡಲಾಗುತ್ತದೆ. ಆದರೆ ಈ ಬಾರಿ ಬೆಳಗಾವಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ, ಕೊಣ್ಣೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ.

ಪ್ರವಾಹ ಭೀತಿಯಿಂದ ಮಧ್ಯಾಹ್ನವೇ ಗಣೇಶನ ನಿಮಜ್ಜನ

ಹೀಗಾಗಿ ರಾತ್ರಿ ವೇಳೆ ಗ್ರಾಮಕ್ಕೆ ಪ್ರವಾಹ ಬಂದರೆ ಗಣೇಶ ನಿಮಜ್ಜನ ಮಾಡಲು ಸಮಸ್ಯೆಯಾಗಬಹುದು ಎಂದು ಮಧ್ಯಾಹ್ನವೇ ನಿಮಜ್ಜನ ಕಾರ್ಯ ಮುಗಿಸಲಾಗಿದೆ.

ABOUT THE AUTHOR

...view details