ಗದಗ :ರಾಜ್ಯದಲ್ಲಿನ ಭಾರೀ ಮಳೆಗೆ ಜನರು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ನಲುಗಿ ಹೋಗಿವೆ. ಕಳೆದ ಕೆಲದಿನಗಳಿಂದ ಗದಗನಲ್ಲಿ ಸುರಿಯುತ್ತಿರುವ ಮಳೆಗೆ ರೈತರ ಬದುಕಿನ ಜೊತೆಗೆ ಪಕ್ಷಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ.
ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋದ ಪಕ್ಷಿಗಳ ಬದುಕು... ತುಂಗೆ ರೌದ್ರನರ್ತನಕ್ಕೆ ಪಕ್ಷಿ ಸಮೂಹಕ್ಕೆ ಹಾನಿ! - ಪಕ್ಷಿಗಳ ಬದುಕು
ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಕೇವಲ ಮನುಷ್ಯರ ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳು ನಲುಗಿ ಹೋಗಿವೆ.
ತುಂಗಭದ್ರಾ ನದಿಯ ಪ್ರವಾಹದಿಂದಾಗಿ ಪಕ್ಷಿಗಳಿಗೂ ಇದರ ಬಿಸಿ ತಟ್ಟಿದೆ.ಗದಗ ಜಿಲ್ಲೆಯಲ್ಲಿ ನದಿ ಆರ್ಭಟಕ್ಕೆ ಪಕ್ಷಿಗಳ ವಾಸ ಸ್ಥಳ ಕೊಚ್ಚಿಕೊಂಡು ಹೋಗಿವೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್ ಹಿನ್ನೀರಿನ ವಿಶಾಲವಾದ ಪ್ರದೇಶದಲ್ಲಿ ಹಲವು ಜಾತಿಯ ಪಕ್ಷಿಗಳು ಗೂಡು ಕಟ್ಟಿಕೊಂಡು ಸಂತಾನೋತ್ಪತ್ತಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದವು. ಆದರೆ, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ತುಂಗಭದ್ರಾ ನದಿ ಉಕ್ಕಿ ಹರಿದಿದೆ. ಅದರ ರೌದ್ರನರ್ತನಕ್ಕೆ ಪಕ್ಷಿ ಸಮೂಹಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ.
ಅನೇಕ ಜಾತಿಯ ಪುಟಾಣಿ ಪಕ್ಷಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಹಮ್ಮಿಗಿ ಬ್ಯಾರೇಜ್ 3.12 ಟಿಎಂಸಿ ನೀರಿನ ಸಾಮಾರ್ಥ್ಯ ಹೊಂದಿದ್ದು, ಆದರೆ ಸದ್ಯ 1.98 ಟಿಎಂಸಿ ನೀರು ಶೇಖರಣೆ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಮಾಡಿದ್ರೆ ಹಲವು ಗ್ರಾಮಗಳು ಜಲಾವೃತಗೊಳ್ಳುತ್ತವೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ಭಾಗದಲ್ಲಿ ಗೂಡು ಕಟ್ಟಿಕೊಂಡಿದ್ದ ನೂರಾರು ಜಾತಿಯ ಪಕ್ಷಿಗಳಿಗೆ ಇದೀಗ ತೊಂದರೆಯಾಗಿದೆ.