ಗದಗ:ವೃದ್ದೆಯ ಸಾವಿನೊಂದಿಗೆ ಗದಗದಲ್ಲಿ ಕೊರೊನಾ ಆತಂಕವನ್ನ ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ಘೋಷಿಸಿದೆ. ಇಂದಿನ ಹೊಸ 7 ಜನ ಸೇರಿ ಇದುವರೆಗೆ ಜಿಲ್ಲೆಯಲ್ಲಿ 349 ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.
349 ಜನರ ಮೇಲೆ ಗದಗ ಜಿಲ್ಲಾಡಳಿತದ ನಿಗಾ: ವೃದ್ಧೆಯ ಸಂಪರ್ಕದಲ್ಲಿದ್ದವರಿಗಾಗಿ ಶೋಧ - ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
ಇಂದಿನ ಹೊಸ 7 ಜನ ಸೇರಿ ಇದುವರೆಗೆ ಗದಗ ಜಿಲ್ಲೆಯಲ್ಲಿ 349 ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದ್ದಾರೆ.
![349 ಜನರ ಮೇಲೆ ಗದಗ ಜಿಲ್ಲಾಡಳಿತದ ನಿಗಾ: ವೃದ್ಧೆಯ ಸಂಪರ್ಕದಲ್ಲಿದ್ದವರಿಗಾಗಿ ಶೋಧ Gadag District Disposal of 349 people dc hirematha said](https://etvbharatimages.akamaized.net/etvbharat/prod-images/768-512-6767443-534-6767443-1586710899532.jpg)
349 ಜನರ ಮೇಲೆ ಗದಗ ಜಿಲ್ಲಾಡಳಿತ ನಿಗಾ, ವೃದ್ಧೆಯ ಸಂಪರ್ಕದಲ್ಲಿದ್ದವರಿಗಾಗಿ ಶೋಧ...
ಜಿಲ್ಲೆಯಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 120 ಜನರಿದ್ದರೆ, ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರು 194 ಜನರಿದ್ದಾರೆ. ಇನ್ನು ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ 34 ಜನರನ್ನ ವಿಶೇಷ ನಿಗಾದಲ್ಲಿಡಲಾಗಿದೆ. ಇದೂವರೆಗೂ ಇಂದಿನ ಹೊಸದಾಗಿ 6 ಜನರನ್ನ ಸೇರಿಸಿ ಒಟ್ಟು 194 ಜನರ ರಕ್ತದ ಮಾದರಿಗಳನ್ನ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಪೈಕಿ 187 ಜನರ ವರದಿಗಳು ನೆಗಟಿವ್ ಆಗಿವೆ. ಇನ್ನು ಕೇವಲ 6 ಜನರ ವರದಿಗಳು ಬಾಕಿ ಇವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಪಿ.166 ಪ್ರಕರಣ ಒಂದು ಕೊವಿಡ್-19 ಎಂದು ಧೃಡಪಟ್ಟಿದೆ. ಇದು ಆತಂಕ ಹೆಚ್ಚಲು ಕಾರಣವಾಗಿದೆ.