ಕರ್ನಾಟಕ

karnataka

ETV Bharat / state

ಗದಗ್​ನಲ್ಲಿ ಕೊರೊನಾ ಪಾಸಿಟಿವ್ ಕೇಸ್​ ಇಲ್ಲ: ಡಿಸಿ ಸ್ಪಷ್ಟನೆ - ಕರ್ನಾಟಕ ಸಂಪೂರ್ಣ ಲಾಕ್​ಡೌನ್​

ರಾಜ್ಯದ ಕೆಲವು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಗದಗ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ ಅಂತ ಡಿಸಿ ಎಂ.ಜಿ ಹಿರೇಮಠ ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಗಾಗಿ 37 ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ ಒಟ್ಟು 33 ಮಾದರಿಗಳು ನಕಾರಾತ್ಮಕವಾಗಿವೆ ಎಂದು ವರದಿಯಾಗಿವೆ. ಉಳಿದ 04 ಮಾದರಿ ವರದಿಗಳು ಬಾಕಿ ಇವೆ ಅಂತ ಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gadag DC told there is positive coronavirus cases in Districts at
ಗದಗ್​ನಲ್ಲಿ ಕೊರೊನಾ ಪಾಸಿಟಿವ್ ಕೇಸ್​ ಇಲ್ಲಾ: ಡಿಸಿ ಸ್ಪಷ್ಟನೆ

By

Published : Mar 26, 2020, 2:59 PM IST

ಗದಗ: ಕೊರೊನಾ ವೈರಸ್ ಹತ್ತಿಕ್ಕುವುದಕ್ಕೆ ದೇಶಾದ್ಯಂತ ಲಾಕ್​ಡೌನ್ ನಂತಹ ಅನೇಕ ಕ್ರಮಗಳನ್ನ ಕೈಗೊಳ್ಳಲಾಗಿದೆ. ವೈರಸ್​ ಹರಡದಂತೆ ತಡೆಯಲು ತೀವ್ರ ನಿಗಾ ವಹಿಸಲಾಗಿದೆ. ರಾಜ್ಯದ ಕೆಲವು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ. ಈ ನಡುವೆ ಗದಗ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಕೇಸ್ ದಾಖಲಾಗಿಲ್ಲ ಅಂತ ಡಿಸಿ ಎಂ.ಜಿ ಹಿರೇಮಠ ಸ್ಪಷ್ಟನೆ ನೀಡಿದ್ದಾರೆ.

ಗದಗ್​ನಲ್ಲಿ ಕೊರೊನಾ ಪಾಸಿಟಿವ್ ಕೇಸ್​ ಇಲ್ಲಾ: ಡಿಸಿ ಸ್ಪಷ್ಟನೆ

ವೈರಸ್ ಹರಡಿರುವ ಬಗೆಗಿನ ಅಂಕಿ ಅಂಶಗಳ ಮಾಹಿತಿಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬಿಡುಗಡೆ ಮಾಡಿದ್ದಾರೆ. ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 164. ಇದರಲ್ಲಿ 28 ದಿನಗಳ ನಿಗಾ ಅವಧಿ ಪೂರೈಸಿದವರು 11ಜನ ಇದ್ರೆ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ 141 ಜನ ಎಂದಿದ್ದಾರೆ.

ವೈದ್ಯಕೀಯ ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ 12 ಜನ. ಇನ್ನು ಪರೀಕ್ಷೆಗಾಗಿ 37 ಮಾದರಿ ಸಂಗ್ರಹಿಸಲಾಗಿದೆ. ಇದರಲ್ಲಿ ಒಟ್ಟು 33 ಮಾದರಿಗಳು ನಕಾರಾತ್ಮಕವಾಗಿವೆ ಎಂದು ವರದಿಯಾಗಿವೆ. ಉಳಿದ 04 ಮಾದರಿ ವರದಿಗಳು ಬಾಕಿ ಇವೆ ಅಂತ ಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details