ಗದಗ: ಜಿಲ್ಲೆಯಲ್ಲಿಂದು ಮತ್ತೆ ಐದು ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 237ಕ್ಕೆ ಏರಿಕೆಯಾಗಿದೆ.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕರಿಯನ ಓಣಿ ನಿವಾಸಿ 24 ವರ್ಷದ ಮಹಿಳೆ ರೋಗಿ-28299ಯಲ್ಲಿ ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ಕುರಟ್ಟಿಪೇಟ ನಿವಾಸಿ 40 ವರ್ಷದ ಪುರುಷ ರೋಗಿ-28300 ಸೋಂಕು ತಗುಲಿದೆ. ಇವರಲ್ಲಿ ಕೆಮ್ಮು ಹಾಗೂ ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆ ಇವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.
ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಇನ್ನು ಹರ್ತಿ ಗ್ರಾಮದ ನಿವಾಸಿ 22 ವರ್ಷದ ಮಹಿಳೆ ರೋಗಿ-18287 ಸೋಂಕಿತರ ಸಂಪರ್ಕದಿಂದಾಗಿ ಗದಗ-ಬೆಟಗೇರಿ ನಗರದ ಜವಳ ಗಲ್ಲಿ ನಿವಾಸಿ 23 ವರ್ಷದ ಮಹಿಳೆ ರೋಗಿ-28301 ಹಾಗೂ ಎ.ಪಿ.ಎಂ.ಸಿ. ಹಿಂದುಗಡೆ ಹಮಾಲರ ಓಣಿ ನಿವಾಸಿ 35 ವರ್ಷದ ಮಹಿಳೆ ರೋಗಿ-28302 ಇವರಿಗೆ ಸೋಂಕು ದೃಢಪಟ್ಟಿರುತ್ತದೆ. ತೆಲಂಗಾಣ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಗೌರಿ ಓಣಿ ನಿವಾಸಿ 32 ವರ್ಷದ ಪುರುಷ ರೋಗಿ-28303 ಇವರಿಗೆ ಸೋಂಕು ತಗುಲಿದೆ.
ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ. ಇನ್ನು ಸೋಂಕಿತರ ಪೈಕಿ ನಾಲ್ಕು ಜನ ಮೃತಪಟ್ಟಿದ್ದು, 165 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 68 ಕೋವಿಡ್-19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.