ಗದಗ: ಮುಂಬೈನಿಂದ ನಗರಕ್ಕೆ ಬಂದ ಕೊರೊನಾ ಸೋಂಕಿತನ ಟ್ರಾವೇಲ್ ಹಿಸ್ಟರಿಯಿಂದ ಜಿಲ್ಲೆಯ ಜನರು ಬೆಚ್ಚಿ ಬೀಳುವಂತಾಗಿದ್ದು, ರೋಗಿಯ ಸಹ ಪ್ರಯಾಣಿಕರನ್ನು ನಿಗಾದಲ್ಲಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಗವಾಯಿ ನಾಡಿಗೆ ಮುಳುವಾದ ಮುಂಬೈನಿಂದ ಬಂದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ - ಕೋವಿಡ್-19
ಮುಂಬೈ ನಿಂದ ಗದಗ ಜಿಲ್ಲೆಗೆ ಬಂದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬನ ಸಂಚಾರ ಇತಿಹಾಸ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಅಲ್ಲದೆ ಸಹ ಪ್ರಯಾಣಿಕರಿಗೆ ಮುಂಜಾಗ್ರತ ಕ್ರಮವಾಗಿ ಕ್ವಾರಂಟೈನ್ ಮಾಡಲು ಗದಗ ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ.
ರೋಗಿ-1566 32 ವರ್ಷದ ವ್ಯಕ್ತಿ ಮಹಾರಾಷ್ಟ್ರದ ಮುಂಬೈಯಿಂದ ಹುಬ್ಬಳ್ಳಿಯವರಿಗೆ ವಿಶೇಷ ಬಸ್ನಲ್ಲಿ ಪ್ರಯಾಣ ಮಾಡಿದ್ದ. ಬಳಿಕ ಹುಬ್ಬಳ್ಳಿಯಿಂದ ಗದಗ ಬಸ್ ನಿಲ್ದಾಣದವರಿಗೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣ ಮಾಡಿದ್ದಾನೆ. ಇನ್ನು ಗದಗ ನಿಂದ ಶಿರಹಟ್ಟಿವರೆಗೆ ಮತ್ತೊಂದು ಬಸ್ನಲ್ಲಿ ಪ್ರಯಾಣಿಸಿದ್ದು, ಬಳಿಕ ಆತನಿಗೆ ಶಿರಹಟ್ಟಿ ತಾಲೂಕಿನ ವರವಿ ಬಳಿಯ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಿಗಾದಲ್ಲಿದ್ದ ವೇಳೆ ಕರೊನಾ ಸೋಂಕು ಧೃಡಪಟ್ಟಿದೆ. ಸದ್ಯ ಆತ ಪ್ರಯಾಣ ಮಾಡಿದ್ದ ಬಸ್ನಲ್ಲಿನ ಸಹ ಪ್ರಯಾಣಿಕರಿಗೆ ಹೆದರಿಕೆ ಶುರುವಾಗಿದೆ. ಈಗಾಗಲೇ ಗದಗ ಮತ್ತು ಧಾರವಾಡ ಜಿಲ್ಲಾಡಳಿತ ಪರಸ್ಪರ ಮಾಹಿತಿ ಹಂಚಿಕೊಂಡಿದ್ದು, ಸಹ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲದೆ ಉಳಿದ ಪ್ರಯಾಣಿಕರ ಪತ್ತೆ ಕಾರ್ಯ ಸಹ ಮುಂದುವರಿದಿದೆ.