ಗದಗ: ಕೊರೊನಾ ಚಿಕಿತ್ಸೆ ಫಲಕಾರಿಯಾಗದೇ ಕಾಂಗ್ರೆಸ್ ಯುವ ನಾಯಕ ಮಹಾಂತೇಶ್ ಬೆಳದಡಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಮಹಾಂತೇಶ್, ಅಸ್ತಮಾ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ನಿನ್ನೆ ಮೃತಪಟ್ಟರು. ಮೃತರ ಪಾರ್ಥಿವ ಶರೀರವನ್ನು ಇಂದು ಆ್ಯಂಬುಲೆನ್ಸ್ ಮೂಲಕ ಗದುಗಿದೆ ತರಲಾಗಿದೆ.
ಅಂತಿಮ ಸಂಸ್ಕಾರಕ್ಕೆ ತಂಡೋಪ ತಂಡವಾಗಿ ಜನ ಕೊರೊನಾ ನಿಯಮ ಉಲ್ಲಂಘನೆ:
ಮಹಾಂತೇಶ್ ಬೆಳದಡಿ ಅಂತಿಮ ಸಂಸ್ಕಾರಕ್ಕೆ ತಂಡೋಪ ತಂಡವಾಗಿ ಜನ ಸೇರಿ, ಲಾಕ್ಡೌನ್ ನಿಯಮ ಮುರಿದಿದ್ದಾರೆ. ಬೆಳದಡಿ ಅವರ ಮನೆ ಬಳಿ ಆ್ಯಂಬುಲೆನ್ಸ್ ಬರ್ತಿದ್ದಂತೆ ನೂರಾರು ಜನ ಸೇರಿದರು. ರಸ್ತೆಯಲ್ಲೇ ನಿಂತಿದ್ದ ಪೊಲೀಸರು ನೋಡಿಯೂ ನೋಡದಂತೆ ಸುಮ್ಮನಾಗಿದ್ದರು. ಜನ ಸಾಮಾಜಿಕ ಅಂತರ ಮರೆತು ಮಾಸ್ಕ್ ಹಾಕದೇ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.