ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಎಲೆಕ್ಟೆಡ್​ ಸಿಎಂ ಅಲ್ಲ, ಅಪಾಯಿಂಟೆಡ್​​​​ ​ ಸಿಎಂ: ಸಿದ್ದರಾಮಯ್ಯ ವ್ಯಂಗ್ಯ - psi scam

ಬೊಮ್ಮಾಯಿ ಎಲೆಕ್ಟೆಡ್​ ಸಿಎಂ ಅಲ್ಲ, ಅಪೈಂಟೆಡ್​ ಸಿಎಂ. ಇಬ್ಬರು ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಕರೇ ಸೆಲೆಕ್ಟ್ ಆಗಿದ್ದಾರೆ. ಈ ಅಕ್ರಮದಲ್ಲಿ ಸರ್ಕಾರದ ಮಂತ್ರಿಗಳೇ ಶಾಮೀಲಾಗಿದ್ದಾರೆ ಹೀಗಾಗಿ ನ್ಯಾಯಾಂಗ ತನಿಖೆಯೇ ಆಗಬೇಕು..

Siddaramaiah
ವಿಪಕ್ಷನಾಯಕ ಸಿದ್ದರಾಮಯ್ಯ

By

Published : May 6, 2022, 8:45 PM IST

Updated : May 6, 2022, 8:54 PM IST

ಗದಗ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಆಗಮಿಸಿದ ವಿಪಕ್ಷನಾಯಕ ಸಿದ್ದರಾಮಯ್ಯ ಪಿಎಸ್​ಐ ಅಕ್ರಮ ನೇಮಕಾತಿ ವಿಚಾರವಾಗಿ ಬೊಮ್ಮಾಯಿ ಎಲೆಕ್ಟೆಡ್​ ಸಿಎಂ ಅಲ್ಲ, ಅಪೈಂಟೆಡ್​ ಸಿಎಂ. ಈ ಅಕ್ರಮದಲ್ಲಿ ಸರ್ಕಾರದ ಮಂತ್ರಿಗಳೇ ಶಾಮೀಲಾಗಿದ್ದಾರೆ. ಇಬ್ಬರು ಸಚಿವ ಅಶ್ವಥ್ ನಾರಾಯಣ ಅವರ ಸಂಬಂಧಿಕರೇ ಸೆಲೆಕ್ಟ್ ಆಗಿದ್ದಾರೆ. ಇದು ಅಕ್ರಮ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.

ಗೃಹ ಸಚಿವರು ರಾಜಿನಾಮೆ ನೀಡಲಿ ಅಕ್ರಮ ನಡೆದಿರುವುದು ಗೃಹ ಇಲಾಖೆಯಲ್ಲಿ ಅಲ್ಲವೇ. ಅಂದು ವಿಧಾನ ಸಭೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಸಾರಾಸಗಟಾಗಿ ವಿಚಾರವನ್ನು ತಳ್ಳಿ ಹಾಕಿದವರು ಪರೀಕ್ಷೆಯನ್ನು ರದ್ದು ಮಾಡಿದ್ದೇಕೆ. ಮರು ಪರೀಕ್ಷೆ ಮಾಡುವುದು ಯಾಕೆ? ಎಂದು ಸಿದ್ದರಾಮಯ್ಯ ದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಪ್ರಶ್ನಿಸಿದರು.

ಇಂತದಕ್ಕೆಲ್ಲ ಸಾಕ್ಷಿಗಳು ಅಂದರೆ ತನಿಖೆಯಾಗಬೇಕು, ಸಿಐಡಿಯಿಂದ ಇದು ತನಿಖೆಯಾಗುವುದಿಲ್ಲ. ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಆಗ್ರಹಿಸಿದರು‌.

ಬೊಮ್ಮಾಯಿ ಎಲೆಕ್ಟೆಡ್​ ಸಿಎಂ ಅಲ್ಲ, ಅಪೈಂಟೆಡ್​ ಸಿಎಂ

ನಮ್ಮ ಪಕ್ಷದ ಪ್ರಿಯಾಂಕ ಖರ್ಗೆ ಅವರನ್ನು ವಿಚಾರಣೆಗೆ ಕರೆಯೋ ಅಧಿಕಾರ ಇಲ್ಲಾ. ಬಂದು ದಾಖಲೆ ಇದ್ದರೆ ಕೇಳಬಹುದು, ವಿಚಾರಣೆಗೆ ಕೇಳೋದಕ್ಕೆ ಬರುವುದಿಲ್ಲ ಎಂದರು. ಇದೇ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೂ ಟಾಂಗ್ ನೀಡಿದ ಸಿದ್ದರಾಮಯ್ಯ, ಮೊದಲು ರಾಜೀನಾಮೆ ಕೊಡಪ್ಪ. ಆಮೇಲೆ ಮುಟ್ಟಿ ಮುಟ್ಟಿ ನೋಡಿಕೊಳ್ಳುವಿಯಂತೆ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ:ಸಿಎಂ ಹುದ್ದೆಗಾಗಿ ಲಂಚ ಸತ್ಯ ಇರ್ಬೋದು ಎಂದ ಸಿದ್ದರಾಮಯ್ಯ: ತನಿಖೆ ನಡೆಸಲು ಸತೀಶ್​ ಜಾರಕಿಹೊಳಿ ಆಗ್ರಹ

ಬಿಜೆಪಿ ಸಚಿವ ಅಶ್ವಥ್ ನಾರಾಯಣ ಸಂಬಂಧಿಕರೇ ಸೆಲೆಕ್ಟ್ ಆಗಿದ್ದಾರೆ. ಒಬ್ಬ 5ನೇ ರ್ಯಾಂಕ್ ಬಂದರೆ, ಇನ್ನೊಬ್ಬ 10ನೇ ರ್ಯಾಂಕ್ ಪಡೆದಿದ್ದಾರೆ. ಇದೇ ಪ್ರಬಲ ಸಾಕ್ಷಿ. ಒಬ್ಬ ನಾಗೇಶ್ ಗೌಡ, ಇನ್ನೊಬ್ಬ ಎಂತದ್ದೋ ಗೌಡ, ಒಬ್ಬ ಮಾಗಡಿಯವನು, ಇನ್ನೊಬ್ಬನದು ಕುಣಿಗಲ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು‌.

Last Updated : May 6, 2022, 8:54 PM IST

ABOUT THE AUTHOR

...view details