ಕರ್ನಾಟಕ

karnataka

ETV Bharat / state

ಪರಿಹಾರ ಹಣ ನೀಡಲು ವಿಳಂಬ: ಗದಗ ಎಪಿಎಂಸಿ ಕಚೇರಿ ಜಪ್ತಿ - gadag apmc issue

ಆರ್​.ಆರ್​ಹೇಮಂತನವರ ಎಂಬುವರಿಗೆ ಎಪಿಎಂಸಿಯು ಸುಮಾರು 16.50 ಲಕ್ಷ ರೂ ಪರಿಹಾರ ಹಣ ಬಾಕಿ ಉಳಿಸಿಕೊಂಡಿತ್ತು. ಈ ಸಂಬಂಧ ಗದಗ ಜಿಲ್ಲಾ ಪ್ರಿನ್ಸಿಪಲ್ ದಿವಾನಿ ಕೋರ್ಟ್ ಕಚೇರಿ ಜಪ್ತಿ ಆದೇಶ ಹೊರಡಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದೆ.

apmc
ಎಪಿಎಂಸಿ ಕಚೇರಿ ಜಪ್ತಿ

By

Published : Apr 6, 2021, 6:58 AM IST

ಗದಗ​:ಪರಿಹಾರದ ಹಣ ನೀಡದೇ ಬಾಕಿ ಉಳಿಸಿಕೊಂಡಿದ್ದು ನಗರದ ಎಪಿಎಂಸಿ ಕಚೇರಿಯನ್ನು ಜಪ್ತಿ ಮಾಡಲಾಗಿದೆ.

ಎಪಿಎಂಸಿ ಕಚೇರಿ ಜಪ್ತಿ

ಆರ್​.ಆರ್​ಹೇಮಂತನವರ ಎಂಬುವರಿಗೆ ಎಪಿಎಂಸಿಯು ಸುಮಾರು 16.50 ಲಕ್ಷ ರೂ ಪರಿಹಾರ ಹಣ ಬಾಕಿ ಉಳಿಸಿಕೊಂಡಿತ್ತು. ಈ ಸಂಬಂಧ ಗದಗ ಜಿಲ್ಲಾ ಪ್ರಿನ್ಸಿಪಲ್ ದಿವಾನಿ ಕೋರ್ಟ್ ಕಚೇರಿ ಜಪ್ತಿ ಆದೇಶ ಹೊರಡಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದೆ. ಹೀಗಾಗಿ ಕಚೇರಿ, ನಾಲ್ಕು ಕಂಪ್ಯೂಟರ್​ ಮತ್ತು ಒಂದು ಫಾರ್ಚ್ಯುನರ್​ ಕಾರನ್ನು ಜಪ್ತಿ ಮಾಡಲಾಗಿದೆ.

ಸುಮಾರು 40 ವರ್ಷಗಳ ಹಳೆಯ ಪ್ರಕರಣ ಇದಾಗಿದ್ದು, ನಗರದ ಶ್ರೀ ಪಂಡಿತ ಪುಟ್ಟರಾಜರ ಮಠಕ್ಕೆ ಹೊಂದಿಕೊಂಡಿರುವ ಸುಮಾರು 4 ಎಕರೆ 35 ಗುಂಟೆ ಜಾಗವನ್ನು 1982ರಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆದರೆ ಪರಿಹಾರದಲ್ಲಿ ಕೇವಲ ಶೇ.50 ರಷ್ಟು ಹಣ ನೀಡಲಾಗಿತ್ತು. ಉಳಿದ ಹಣ ನೀಡಲು ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಆಗ ಮೂಲ ಜಾಗದ ಮಾಲೀಕರು ಕೋರ್ಟ್​ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್​ ಅಂಗಳದವರೆಗೂ ವ್ಯಾಜ್ಯ ಹೋಗಿ ಬಳಿಕ ಪ್ರಿನ್ಸಿಪಲ್ ಕೋರ್ಟ್​​ಗೆ ವರ್ಗಾವಣೆಯಾಗಿತ್ತು. ಇದೀಗ ಸಾಮಗ್ರಿ ಜಪ್ತಿ ಮಾಡಿ ಅವರಿಗೆ ಸಲ್ಲಬೇಕಾಗಿರುವ ಬಾಕಿ ಹಣವನ್ನು ನೀಡುವವರೆಗೂ ಜಪ್ತಿಯಾಗಿರೋ ವಸ್ತುಗಳನ್ನು ವಶಕ್ಕೆ ಪಡೆಯಲು ಕೋರ್ಟ್​ ಆದೇಶ ಮಾಡಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಲು ಯಾವ ಹಿರಿಯ ಅಧಿಕಾರಿಯೂ ಕಚೇರಿಯಲ್ಲಿ ಇರಲಿಲ್ಲ. ಅಧ್ಯಕ್ಷರಾಗಲಿ, ಕಾರ್ಯದರ್ಶಿಯಾಗಲಿ ಯಾರೊಬ್ಬರೂ ಕಚೇರಿಯತ್ತ ಸುಳಿದಿರಲಿಲ್ಲ, ಕರೆ ಮಾಡಿದರೂ ಕರೆ ಸ್ವಿಕರಿಸಲಿಲ್ಲ.

ಕಚೇರಿಯಲ್ಲಿದ್ದ ಇತರೆ ಸಿಬ್ಬಂದಿ ಕೆಲಸ ಮಾಡಲು ಕಂಪ್ಯೂಟರ್​ ಇಲ್ಲದೆ ಪರದಾಡಿದರು. ಕಚೇರಿಯ ವಾಹನವನ್ನೂ ಸಹ ತೆಗೆದುಕೊಂಡು ಹೋಗಿದ್ದರಿಂದ ವಾಹನ ಇಲ್ಲದೆಯೂ ಸಿಬ್ಬಂದಿ ಅಲೆದಾಡುವಂತಾಯ್ತು.

ABOUT THE AUTHOR

...view details