ಗದಗ : ಸಹಕಾರಿ ಸಂಘದ ನವೀಕರಣಕ್ಕೆ ಹಣದ ಬೇಡಿಕೆಯಿಟ್ಟ ಜಿಲ್ಲಾ ಸಹಕಾರಿ ಇಲಾಖೆ ಮತ್ತು ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಲಮಾಣಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿ ಎಸಿಬಿ ಬಲೆಗೆ - ಗದಗ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ, ಸಹಕಾರಿ ಇಲಾಖೆ ಅಧಿಕಾರಿ, ಜಿಲ್ಲಾ ಸಹಕಾರಿ ಇಲಾಖೆ ಮತ್ತು ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ , ನಗರದ ಮುಳಗುಂದ ನಾಕಾದಲ್ಲಿನ ಪೆಟ್ರೋಲ್ ಬಂಕ್ , ಕನ್ನಡ ವಾರ್ತೆ, ಈ ಟಿವಿ ಭಾರತ
ಸಹಕಾರಿ ಸಂಘದ ನವೀಕರಣಕ್ಕಾಗಿ ಲಂಚದ ಬೇಡಿಕೆಯಿಟ್ಟಿದ್ದ ಸಹಕಾರಿ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಗದಗದಲ್ಲಿ ನಡೆದಿದೆ. ವ್ಯಕ್ತಿಯೊಬ್ಬನಿಂದ ಲಂಚದ ಹಣ ಸ್ವೀಕರಿಸಲು ತೆರಳಿದಾಗ ಈ ಅಧಿಕಾರಿಯನ್ನು ಎಸಿಬಿ ವಶಕ್ಕೆ ಪಡೆದಿದೆ.
![ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿ ಎಸಿಬಿ ಬಲೆಗೆ](https://etvbharatimages.akamaized.net/etvbharat/prod-images/768-512-3916856-thumbnail-3x2-hrs.jpg)
ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ಎಸಿಬಿ ಬಲೆಗೆ ಬಿದ್ದ ಅಧಿಕಾರಿ
ನಗರದ ಮುಳಗುಂದ ನಾಕಾದಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಮಹಾಂತೇಶ್ ಎನ್ನುವವರಿಂದ ಹಣ ಪಡೆಯುವಾಗಚಂದ್ರಶೇಖರ್ ಲಮಾಣಿ ಅವರನ್ನು ವಶಕ್ಕೆ ಪಡೆದಿದ್ದಾರೆ.
13,500 ರೂಪಾಯಿ ನೀಡಿದರೆ ಸಹಕಾರಿ ಸಂಘದ ನವೀಕರಣ ಪತ್ರ ನೀಡುವುದಾಗಿ ಚಂದ್ರಶೇಖರ್ ಲಮಾಣಿ ಹೇಳಿದ್ದರು. ಈ ಬಗ್ಗೆ ಮಹಾಂತೇಶ್ ಎಸಿಬಿ ಅಧಿಕಾರಿಗಳ ಮೊರೆ ಹೋಗಿದ್ದರು. ಈ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸಲು ಬಂದಿದ್ದ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.